ADVERTISEMENT

ನೋಯ್ಡಾ: ಔಡಿ ಕಾರು ಹಿಟ್ ಆ್ಯಂಡ್ ರನ್– ಪಾದಚಾರಿ ಸಾವು

ಪುಣೆಯಲ್ಲಿ ಸಂಭವಿಸಿದ ಪೋಶೆ ಕಾರು ಅಪಘಾತ ರಾಷ್ಟ್ರವ್ಯಾಪಿ ಸುದ್ದಿಯಾಗಿರುವ ಬೆನ್ನಲ್ಲೇ ನೋಯ್ಡಾದಲ್ಲೂ ಐಷಾರಾಮಿ ಕಾರೊಂದು ಪಾದಚಾರಿಯ ಸಾವಿಗೆ ಕಾರಣವಾಗಿದೆ.

ಪಿಟಿಐ
Published 27 ಮೇ 2024, 4:48 IST
Last Updated 27 ಮೇ 2024, 4:48 IST
<div class="paragraphs"><p>ಘಟನೆ ನಡೆದ ಸಂದರ್ಭ</p></div>

ಘಟನೆ ನಡೆದ ಸಂದರ್ಭ

   

ನೋಯ್ಡಾ, ಉತ್ತರ ಪ್ರದೇಶ: ಪುಣೆಯಲ್ಲಿ ಸಂಭವಿಸಿದ ಪೋಶೆ ಕಾರು ಅಪಘಾತ ರಾಷ್ಟ್ರವ್ಯಾಪಿ ಸುದ್ದಿಯಾಗಿರುವ ಬೆನ್ನಲ್ಲೇ ನೋಯ್ಡಾದಲ್ಲೂ ಐಷಾರಾಮಿ ಕಾರೊಂದು ಪಾದಚಾರಿಯ ಸಾವಿಗೆ ಕಾರಣವಾಗಿದೆ.

ಭಾನುವಾರ ಬೆಳಿಗ್ಗೆ 6:30 ರ ಸುಮಾರು ನೋಯ್ಡಾ ಹೊರವಲಯದ ಗೌತಮ್ ಬುದ್ಧ ನಗರ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬಿಳಿ ಬಣ್ಣದ ಔಡಿ ಕಾರೊಂದು ಪಾದಚಾರಿಯೊಬ್ಬರಿಗೆ ಗುದ್ದಿಕೊಂಡು ಹೋಗಿದ್ದರಿಂದ ಪಾದಚಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತರನ್ನು 54 ವರ್ಷದ ಜಾನಕ್ ದೇವ್ ಎಂದು ಗುರುತಿಸಲಾಗಿದೆ. ಈ ಕುರಿತು ಮೃತನ ಮಗ ಗಿಜ್ಜೋರ್ ಹಳ್ಳಿಯ ಪ್ರದೀಪ್ ಎನ್ನುವರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರಿನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.

ಪಾದಚಾರಿಗೆ ಔಡಿ ಕಾರು ಗುದ್ದಿಕೊಂಡು ಹೋದ ನಂತರ ಪಾದಚಾರಿ ಗಾಳಿಯಲ್ಲಿ ಕೆಲವು ಮೀಟರ್ ದೂರ ಹಾರಿ ಬಿದ್ದಿದ್ದಾರೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇ 19 ರಂದು ಪುಣೆಯ ಉದ್ಯಮಿಯೊಬ್ಬರ 17 ವರ್ಷದ ಮಗ ದುಬಾರಿ ಪೋಶೆ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದ, ಅಪಘಾತದಲ್ಲಿ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು. ಕಾರು ಚಲಾಯಿಸುವ ವೇಳಾ ಬಾಲಕ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿತ್ತು.

ಮೇ 16 ರಂದು ಬಾಲಕನೊಬ್ಬ ಬಿಎಂಡಬ್ಲೂ ಕಾರು ಚಲಾಯಿಸಿ ರಿಕ್ಷಾ ಒಂದಕ್ಕೆ ಅಪಘಾತ ಮಾಡಿದ್ದ. ಇದರಿಂದ ನರ್ಸ್ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.