ADVERTISEMENT

ವಿಡಿಯೊ | ಕತ್ತಿ ಹಿಡಿದು ನೃತ್ಯ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ತಲ್ವಾರ್‌ ರಾಸ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 6:49 IST
Last Updated 16 ನವೆಂಬರ್ 2019, 6:49 IST
ತಲ್ವಾರ್‌ ರಾಸ್‌ ಪ್ರದರ್ಶಿಸಿದ ಸ್ಮೃತಿ ಇರಾನಿ
ತಲ್ವಾರ್‌ ರಾಸ್‌ ಪ್ರದರ್ಶಿಸಿದ ಸ್ಮೃತಿ ಇರಾನಿ    

ಭಾವ್‌ನಗರ(ಗುಜರಾತ್‌): ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಕತ್ತಿ ಹಿಡಿದು ನೃತ್ಯ ಪ್ರದರ್ಶನ ನೀಡಿದರು.

ವೇದಿಕೆಯ ಮೇಲೆ ಎರಡು ಕತ್ತಿ ಹಿಡಿದು ತಿರುಗಿಸುತ್ತ ಕಲಾವಿದರೊಂದಿಗೆ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಕಲಾವಿದರು ತೋರುತ್ತಿದ್ದಂತೆ ಅನುಕರಿಸಲು ಸ್ಮೃತಿ ಪ್ರಯತ್ನಿಸಿದರು. ರಾಜಸ್ಥಾನ ಮತ್ತು ಗುಜರಾತ್‌ನ ಪ್ರಸಿದ್ಧ ಸಾಂಪ್ರದಾಯಿಕ ನೃತ್ಯ ಕಲೆ 'ತಲ್ವಾರ್‌ ರಾಸ್‌' ಪ್ರದರ್ಶಿಸಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಭಾವ್‌ನಗರದಲ್ಲಿ ಶ್ರೀ ಸ್ವಾಮಿನಾರಾಯಣ ಗುರುಕುಲ ಆಯೋಜಿಸಿದ್ದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಕೇಂದ್ರ ಜವಳಿ ಮತ್ತು ಮಹಿಳಾ, ಮಕ್ಕಳ ಅಭಿವೃದ್ಧಿ ಸಚಿವೆ ಭಾಗಿಯಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.