ADVERTISEMENT

ಹಾಂಗ್‌ಕಾಂಗ್‌ನಲ್ಲಿ ಏರ್‌ ಇಂಡಿಯಾ ವಿಮಾನಗಳಿಗೆ ನಿರ್ಬಂಧ

ಕೆಲವು ಪ್ರಯಾಣಿಕರಿಗೆ ಕೋವಿಡ್‌ ಸೋಂಕು

ಪಿಟಿಐ
Published 19 ಆಗಸ್ಟ್ 2020, 7:53 IST
Last Updated 19 ಆಗಸ್ಟ್ 2020, 7:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೆಲವು ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾರಣ, ಹಾಂಗ್‌ಕಾಂಗ್‌ ಸರ್ಕಾರ ಆಗಸ್ಟ್‌ ಅಂತ್ಯದವರೆಗೆಎಲ್ಲ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ.

ಏರ್‌ ಇಂಡಿಯಾ ವಿಮಾನವೊಂದರಲ್ಲಿ ಹಾಂಕಾಂಗ್‌ಗೆ ಬಂದ ಕೆಲವು ಪ್ರಯಾಣಿಕರಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ, ತನ್ನ ದೇಶಕ್ಕೆ ಬರುವ ಎಲ್ಲ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ತಿಂಳಾಂತ್ಯದವರೆಗೆ ನಿರ್ಬಂಧಿಸಿದೆ.

ಹಾಂಗ್ ಕಾಂಗ್ ಸರ್ಕಾರದ ನಿಯಮಗಳ ಪ್ರಕಾರಭಾರತದ ಹೊರತುಪಡಿಸಿ,ಬಾಂಗ್ಲಾದೇಶ, ಇಂಡೋನೇಷ್ಯಾ, ಕಜಕಿಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪ್ಪಿನ್ಸ್‌, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಿಂದ ಬರುವ ಎಲ್ಲ ಪ್ರಯಾಣಿಕರು, ಪ್ರಯಾಣಕ್ಕೆ ಮುನ್ನ ಕೋವಿಡ್‌ ನೆಗೆಟಿವ್‌ ಇರುವ ವರದಿ ನೀಡುವುದು ಕಡ್ಡಾಯ.

ADVERTISEMENT

ಹಾಂಕಾಂಗ್‌ ಸರ್ಕಾರಜುಲೈ ತಿಂಗಳಲ್ಲಿ ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ, ಭಾರತದಿಂದ ಬರುವ ಪ್ರಯಾಣಿಕರು 72 ಗಂಟೆಗಳ ಮೊದಲು ಕೋವಿಡ್‌ ನೆಗೆಟಿವ್‌ ಇರುವ ಪ್ರಮಾಣ ಪತ್ರವನ್ನು ಪಡೆದಿರಬೇಕೆಂದು ಹೇಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.