ನವದೆಹಲಿ: ತನಿಖಾ ಸಂಸ್ಥೆಗಳಿಂದ ಬೆದರಿಕೆಯೊಡ್ಡುವ ಮೂಲಕ ಹಾಗೂ ಹಣದ ಆಮಿಷವೊಡ್ಡಿ ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಬೀಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಎಎಪಿ ರಾಜ್ಯಸಭಾ ಸದಸ್ಯ ರಾಘವ ಚಡ್ಡಾ ಭಾನುವಾರ ಹೇಳಿದ್ದಾರೆ.
‘ಪಕ್ಷಾಂತರ ವಿರೋಧಿ ಕಾನೂನಿನ ಬಲವರ್ಧನೆಗಾಗಿ ಕಳೆದ ವರ್ಷ ಸಂಸತ್‌ನಲ್ಲಿ ನಾನು ಮಸೂದೆ ಮಂಡಿಸಿದ್ದೆ. ಇಂದು ಪ್ರಜಾಪ್ರಭುತ್ವವನ್ನು ಉಳಿಸಲು ಈ ಮಸೂದೆಯು ಅಗತ್ಯವಾಗಿದೆ’ ಎಂದು ಅವರು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಪಕ್ಷ ತೊರೆಯಲು ಎಎಪಿಯ ಏಳು ಶಾಸಕರಿಗೆ ಬಿಜೆಪಿಯು ತಲಾ ₹25 ಕೋಟಿ ನೀಡುವುದಾಗಿ ಆಮಿಷವೊಡ್ಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.