ADVERTISEMENT

ಸದನ ನಿಮ್ಮ ನಿರ್ದೇಶನದಂತೆ ನಡೆಯಲಿ, ಇತರರ ಅಭಿಪ್ರಾಯದಂತಲ್ಲ: ಬಿರ್ಲಾಗೆ ಅಖಿಲೇಶ್

ಪಿಟಿಐ
Published 26 ಜೂನ್ 2024, 14:17 IST
Last Updated 26 ಜೂನ್ 2024, 14:17 IST
<div class="paragraphs"><p>ಅಖಿಲೇಶ್ ಯಾದವ್‌</p></div>

ಅಖಿಲೇಶ್ ಯಾದವ್‌

   

ಪಿಟಿಐ

ನವದೆಹಲಿ: ಲೋಕಸಭೆಯ ಸ್ವೀಕರ್‌ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಪ್ರಜಾಸತ್ತಾತ್ಮಕ ನ್ಯಾಯದ ‘ಮುಖ್ಯ ನ್ಯಾಯಮೂರ್ತಿ’ ಎಂದು ಬಣ್ಣಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌, ಸದನವು ನಿಮ್ಮ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕೆ ಹೊರತು ಉಳಿದವರ ಅಭಿಪ್ರಾಯದಂತೆ ಅಲ್ಲ ಎಂದು ಹೇಳಿದ್ದಾರೆ.

ADVERTISEMENT

ಬಿರ್ಲಾ ಅವರನ್ನು ಅಭಿನಂದಿಸಿ ಸದನದಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರಾಗಿ ಎಲ್ಲ ಪಕ್ಷದವರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುತ್ತೀರಿ ಎಂದು ಎಲ್ಲಾ ಸದಸ್ಯರು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಿಷ್ಪಕ್ಷಪಾತವು ಉನ್ನತ ಹುದ್ದೆಯ ಮಹತ್ತರ ಜವಾಬ್ದಾರಿಯಾಗಿದೆ. ಸದನದ ಘನತೆಗೆ ಧಕ್ಕೆ ತರುವಂತಹ ಸಂಸದರನ್ನು ಅಮಾನತು ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಆಶಿಸುತ್ತೇನೆ ಎಂದು ಅಖಿಲೇಶ್‌ ಹೇಳಿದ್ದಾರೆ.

ನಿಮ್ಮ (ಸಭಾಧ್ಯಕ್ಷ) ನ್ಯಾಯಯುತ ನಿರ್ಧಾರಗಳಿಗೆ ನಾವೆಲ್ಲ ಜತೆಯಾಗಿ ನಿಲ್ಲುತ್ತೇವೆ. ಆದರೆ ಪ್ರತಿಪಕ್ಷವನ್ನು ಗುರಿಯಾಗಿಸಿ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದು ಎಂದು ಅಖಿಲೇಶ್ ಎಚ್ಚರಿಸಿದ್ದಾರೆ.

ಸಮಾಜವಾದಿ ಪಕ್ಷ (ಎಸ್‌ಪಿ) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ನಂತರ ಎರಡನೇ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.