ADVERTISEMENT

ಕೇರಳ: ಮಹಿಳಾ ಸಬಲೀಕರಣಕ್ಕೆ ಫಿಟ್‌ನೆಸ್‌ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:19 IST
Last Updated 16 ಜುಲೈ 2024, 15:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದ ಕೋಟಯಂ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಯೊಂದು ಮಹಿಳೆಯರಿಗಾಗಿ ‘ಫಿಟ್ನೆಸ್ ಕೇಂದ್ರ’ ಸ್ಥಾಪಿಸುವ ಮೂಲಕ ಮಹಿಳೆಯರ ಸಬಲೀಕರಣದ ಹೊಸ ಮಾದರಿಗೆ ನಾಂದಿ ಹಾಡಿದೆ.

ಈ ಫಿಟ್‌ನೆಸ್‌ ಕೇಂದ್ರದಲ್ಲಿ 60 ವರ್ಷದ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದು, ಇದರಿಂದ ಉತ್ತೇಜಿತಗೊಂಡಿರುವ ಅಯ್ಮಾನಮ್ ಗ್ರಾಮ ಪಂಚಾಯಿತಿಯು ಮತ್ತೆರಡು ‘ವನಿತಾ ಫಿಟ್‌ನೆಸ್‌ ಕೇಂದ್ರ’ಗಳ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಿದೆ. 

ಮಹಿಳೆಯರಲ್ಲಿ ಹೆಚ್ಚುತ್ತಿರುವ ಕಾಯಿಲೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ಫಿಟ್‌ನೆಸ್‌ ಕೇಂದ್ರಗಳು ಇಲ್ಲದಿರುವುದನ್ನು ಮನಗಂಡು, ಮಹಿಳೆಯರಿಗಾಗಿ ಮಾತ್ರವೇ ಇಂತಹ ಕೇಂದ್ರ ಆರಂಭಿಸುವ ಯೋಚನೆ ಬಂದಿತ್ತು. ಈ ಕೇಂದ್ರದಲ್ಲಿ ಫಿಟ್‌ನೆಸ್‌ಗೆ ಸಂಬಂಧಿಸಿದ ಅತ್ಯಾಧುನಿಕ ಸಲಕರಣೆಗಳ ಜೊತೆಗೆ ಯೋಗ ತರಬೇತಿಯನ್ನೂ ನೀಡಲಾಗುತ್ತಿದೆ. ಇದಕ್ಕಾಗಿ ತರಬೇತುದಾರರೊಬ್ಬರನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.