ಲಖನೌ: ‘ರಾಮ ಮಂದಿರ ನಿರ್ಮಿಸಲು ಗುರುತಿಸಿರುವ ಜಾಗದಲ್ಲಿ, ಮುಸ್ಲಿಮರ ಸ್ಮಶಾನವಿದೆ. ಹಿಂದೂ ಸಂಪ್ರದಾಯದಲ್ಲಿ ಸ್ಮಶಾನದ ಮೇಲೆ ಮಂದಿರ ಕಟ್ಟಲು ಅವಕಾಶವಿದೆಯೇ’ ಎಂದು ಅಯೋಧ್ಯೆಯ ಮುಸ್ಲಿಂ ನಿವಾಸಿಗಳು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.
‘ಸ್ಮಶಾನದ ಮೇಲೆ ಮಂದಿರ ಕಟ್ಟಬಹುದೇ ಎಂಬ ಬಗ್ಗೆ ಹಿಂದೂ ಧರ್ಮವನ್ನು ಚೆನ್ನಾಗಿ ಬಲ್ಲವರು ಬೆಳಕು ಚೆಲ್ಲಬೇಕು. ರಾಮನಿಗೆ ನಮ್ರವಾಗಿ, ಗೌರವದಿಂದ ನಮಿಸಿ, ಈ ಸ್ಮಶಾನದ ಜಾಗವನ್ನು ಮುಸ್ಲಿಮರಿಗೆ ಬಿಟ್ಟುಕೊಡಬೇಕು’ ಎಂದುಅಯೋಧ್ಯೆ ನಿವಾಸಿ ಹಾಜಿ ಮೊಹಮ್ಮದ್ ಮತ್ತು ಇತರರು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
‘ಬಾಬ್ರಿ ಮಸೀದಿ ಧ್ವಂಸದ ಬಳಿಕ ಸರ್ಕಾರ ಸ್ವಾಧೀನ ಪಡಿಸಿಕೊಂಡ 67 ಎಕರೆ ಭೂಮಿಯ ಪೈಕಿ ಐದು ಎಕರೆಯಲ್ಲಿ ಸ್ಮಶಾನವಿದೆ ಎಂದೂ ಪತ್ರದಲ್ಲಿ ಹೇಳಿದ್ದಾರೆ. ವಕೀಲ ಎಂ.ಆರ್. ಶಂಶದ್ ಅವರು ಈ ಬಗ್ಗೆ 10 ಮಂದಿ ಟ್ರಸ್ಟಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.