ADVERTISEMENT

ಹಿಮಾಚಲ ಉಪಚುನಾವಣೆ: ಬಿಜೆಪಿ ಸೇರಿದ್ದ ಮೂವರು ಪಕ್ಷೇತರರಿಗೆ ಟಿಕೆಟ್‌

ಪಿಟಿಐ
Published 14 ಜೂನ್ 2024, 13:49 IST
Last Updated 14 ಜೂನ್ 2024, 13:49 IST
. 
   

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿ, ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮೂವರು ಪಕ್ಷೇತರರು ಈಗ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ.

ಗುರುವಾರ ಬಿಡುಗಡೆ ಮಾಡಿರುವ ಬಿಜೆಪಿ ಪಟ್ಟಿಯಲ್ಲಿ ಆಶಿಶ್‌ ಶರ್ಮಾ (ಹಮಿರ್‌ಪುರ), ಹೋಶಿಯಾರ್‌ ಸಿಂಗ್‌ (ದೆಹ್ರಾ), ಮತ್ತು ಕೆ.ಎಲ್‌ ಠಾಕೂರ್‌ (ನಾಲಾಗಢ) ಹೆಸರುಗಳಿವೆ. ಜುಲೈ 10ರಂದು ಈ ಮೂರೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 

ಮೂವರು ಪಕ್ಷೇತರ ಶಾಸಕರು ಹಾಗೂ ಕಾಂಗ್ರೆಸ್‌ನ 6 ಜನ ಬಂಡಾಯ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಪರವಾಗಿ ಮತ ಚಲಾಯಿಸಿದ್ದರು. ಹರ್ಷ್‌ ಅವರು ಚುನಾವಣೆಯಲ್ಲಿ ಜಯಗಳಿಸಿದ್ದರು. ಇದಾದ ಬಳಿಕ ಈ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಈ ಕ್ಷೇತ್ರಗಳಿಗೆ ಈಚೆಗೆ ಉಪಚುನಾವಣೆ ನಡೆದಿತ್ತು.

ADVERTISEMENT

ಈಗ ಉಳಿದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಬಿಜೆಪಿ, ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.