ಇಂಫಾಲ: ಮಣಿಪುರ ರಾಜ್ಯದ ಇಂಫಾಲ ಪೂರ್ವ, ಬಿಷ್ಣುಪುರ್ ಮತ್ತು ಚುರಚಾಂದಪುರ ಜಿಲ್ಲೆಗಳಲ್ಲಿ ಮಂಗಳವಾರ ಭದ್ರತಾ ಪಡೆಗಳು ಮಂಗಳವಾರ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ ಪೂರ್ವ ಜಿಲ್ಲೆಯಲ್ಲಿ ಜಪ್ತಿ ಮಾಡಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಎಂಟು ಬಂದೂಕು, 62 ಮದ್ದುಗುಂಡು, 19 ಸ್ಫೋಟಕಗಳು, ನಾಡಬಂದೂಕು, ಗ್ರನೇಡ್‌ಗಳು, ಎರಡು ವೈರ್‌ಲೆಸ್ ಸೆಟ್‌ಗಳು, ಐದು ಬುಲೆಟ್‌ಪ್ರೂಫ್ ಜಾಕೆಟ್‌ಗಳು ಸೇರಿವೆ.
ಚುರಚಾಂದಪುರ ಜಿಲ್ಲೆಯ ಓಲ್ಡ್ ಡಂಪಿ ಗ್ರಾಮದಲ್ಲಿ ವಶಕ್ಕೆ ಪಡೆಯಲಾದ ಶಸ್ತ್ರಾಸ್ತ್ರಗಳಲ್ಲಿ 9 ಎಂಎಂ ಪಿಸ್ತೂಲ್, ಎರಡು ಬಂದೂಕು, ಗ್ರನೇಡ್, ಸುಧಾರಿತ ಬಾಂಬ್, 21 ರೌಂಡ್‌ನ ಭಾರಿ ಸಾಮರ್ಥ್ಯದ ಮಷಿನ್ ಗನ್‌ಗಳು ಸೇರಿವೆ.
ಮಣಿಪುರದ ಮೂಲಭೂತವಾದಿ ಸಂಘಟನೆ ಯುಎಲ್‌ಟಿಎ ಮುಖ್ಯ ಕಮಾಂಡರ್, 50 ವರ್ಷದ ಲ್ಯಾಮ್ಟಿನ್‌ಸೈ ಸಿಂಗ್ಸನ್ ಎಂಬಾತನನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಆತನಿಂದ 124 ಗ್ರಾಂ ಬ್ರೌನ್‌ಷುಗರ್ ವಶಕಪಡಿಸಿಕೊಂಡಿದ್ದರು.
ಸೋಮವಾರ ಮತ್ತೊಂದು ಬೆಳವಣಿಗೆಯಲ್ಲಿ ಗುಂಪೊಂದು ಅಹಪರಿಸಿದ್ದ ವ್ಯಕ್ತಿಯೊಬ್ಬನನ್ನು ಬಿಷ್ಣುಪುರ್ ಜಿಲ್ಲೆಯ ಇಥಾಯಿ ಗ್ರಾಮದಲ್ಲಿ ಪೊಲೀಸರು ರಕ್ಷಿಸಿದರು. ಆ ವೇಳೆ ಎಸ್ಎಲ್ಆರ್, 10 ಶಸ್ತ್ರಾಸ್ತ್ರಗಳು, ಅಶ್ರುವಾಯು ಗನ್, 7 ಶೆಲ್‌ಗಳನ್ನೂ ವಶಕ್ಕೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.