ಲಂಡನ್ : ವಜ್ರ ವ್ಯಾಪಾರಿ ನೀರವ್ ಮೋದಿ ಸೆರೆವಾಸ ಅನುಭವಿಸುತ್ತಿರುವ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಿಂದ ಶಂಕಿತ ಉಗ್ರ ಪರಾರಿಯಾಗಿದ್ದು, ಆತನ ಪತ್ತೆಗಾಗಿ ದೇಶದಾದ್ಯಂತ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬ್ರಿಟನ್‌ನ ಅಧಿಕೃತ ರಹಸ್ಯ ಕಾಯಿದೆ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಬ್ರಿಟನ್ ಸೇನೆಯ ಮಾಜಿ ಯೋಧ ಡೇನಿಯಲ್ ಅಬೇದ್ ಖಲೀಫ್ (21) ಜೈಲಿನಿಂದ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನೊಳಗೆ ಸಾಮಗ್ರಿ ತರುವ ವ್ಯಾನ್‌ನ ಕೆಳಭಾಗದಲ್ಲಿ ಅವಿತು ಈತ ಪರಾರಿಯಾಗಿರುವುದಾಗಿ ಹೇಳಿದ್ದಾರೆ.
‘ಡೇನಿಯಲ್‌ನ ಪತ್ತೆಗಾಗಿ ತಂಡ ರಚಿಸಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಕಮಾಂಡರ್ ಡೊಮಿನಿಕ್ ಮರ್ಫಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.