ಶ್ರೀನಗರ: ಹುರಿಯತ್ ಮುಖಂಡರು ಇಂದು ಕೇಂದ್ರ ಸರ್ಕಾರದ ಜೊತೆಗೆ ಚರ್ಚೆಗೆ ಸಿದ್ಧರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಶನಿವಾರ ಹೇಳಿದ್ದಾರೆ.
ಇಲ್ಲಿ ಹಮ್ಮಿಕೊಂಡಿದ್ದ ದೂರದರ್ಶನ ಸೆಟ್ ಟಾಪ್‌ಬಾಕ್ಸ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,’ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ಯುವಕರನ್ನು ಮರುಳು ಮಾಡಿ ಭಯೋತ್ಪಾದನೆಯತ್ತ ಸೆಳೆಯಲಾಗುತ್ತದೆ. ಅವರು ಅದರಿಂದ ಮರಳಿ ಬಂದರೆ ಎರಡು ಸ್ವರ್ಗ ಸಿಗುತ್ತದೆ. ಒಂದು ಸ್ವರ್ಗ ಕಾಶ್ಮೀರವಾದರೆ ಇನ್ನೊಂದು ನೈಜ ಮುಸ್ಲಿಮರಾಗಿ ಬದುಕುವುದು‘ ಎಂದಿದ್ದಾರೆ.
ಸ್ಥಳೀಯ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಗೊಳಿಸುವ ಕಾರ್ಯ ಬಹುತೇಕ ನಿಂತಿದೆ. ಕಲ್ಲೆಸೆಯುವ ಪ್ರಕರಣಗಳೂ ಸಹ ಕಡಿಮೆಯಾಗಿವೆ ಎಂದು ಹೇಳಿದ್ದಾರೆ.
‘ಪ್ರತಿ ಮನೆಯಲ್ಲೂ ಟಿ.ವಿ’
’ಪ್ರತಿ ಮನೆಯಲ್ಲೂ ಟಿ.ವಿ. ಹೊಂದಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಶೀಘ್ರ ಪಾತ್ರವಾಗಲಿದೆ‘ ಎಂಬ ವಿಶ್ವಾಸವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.