ಔರಂಗಾಬಾದ್: ‘ಕೆಲವು ಸದಸ್ಯರು ಪಕ್ಷದಿಂದ ಲಾಭ ಪಡೆದು, ಪಕ್ಷಕ್ಕೆ ಕೈಕೊಟ್ಟಿರುವುದು ನೋವುಂಟು ಮಾಡಿದೆ. ಆದರೆ, ನಾವು ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇವೆ.ಶೀಘ್ರದಲ್ಲೇ ಮರಾಠವಾಡದ ಹಿಂಗೋಲಿಗೂ ಭೇಟಿ ನೀಡುವೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಂಗಳವಾರ ಹಿಂಗೋಲಿಯ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಶಿವಸೇನಾ ಮುಖಂಡರ ಸಭೆ ವೇಳೆ, ಪಕ್ಷದ ಕಾರ್ಯಕರ್ತರೊಂದಿಗೆ ದೂರವಾಣಿಯಲ್ಲಿ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
‘ಅವರು (ಶಾಸಕರು ಮತ್ತು ಸಚಿವರು) ಸೇನಾ ಕಾರ್ಯಕರ್ತರಿಂದ ಗೆದ್ದಿದ್ದರು. ಪಕ್ಷ ಅವರಿಗೆ ಎಲ್ಲ ಸ್ಥಾನಮಾನವನ್ನು ಪಕ್ಷದೊಳಗೂ ನೀಡಿತ್ತು. ಆದರೂ, ಅವರು ಪಕ್ಷ ತೊರೆದರು. ಇದರಿಂದ ತುಂಬಾ ನೋವಾಗಿದೆ. ಆದರೆ, ಏನನ್ನೂ ಪಡೆಯದವರು ನನ್ನೊಂದಿಗೆ ಉಳಿದಿದ್ದಾರೆ’ ಎಂದು ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ತಿಳಿಸಿರುವುದಾಗಿಸೇನಾದ ನಾಯಕ ರಮೇಶ್ ಶಿಂಧೆ ತಿಳಿಸಿದ್ದಾರೆ. ಈ ಸಭೆಯ ವಿಡಿಯೊ ವೈರಲ್ ಆಗಿದೆ.
ಹಿಂಗೋಲಿ ಜಿಲ್ಲೆಯ ಕಲಮ್ನುರಿಯ ಸೇನಾ ಶಾಸಕ ಸಂತೋಷ್ ಬಾಂಗರ್, ವಿಶ್ವಾಸಮತ ಪರೀಕ್ಷೆಗೂಸ್ವಲ್ಪ ಮೊದಲು ಏಕನಾಥ್ ಶಿಂಧೆ ಬಣ ಸೇರಿದರು. ಸಂತೋಷ್ ಬಾಂಗರ್ ಇತ್ತೀಚೆಗಷ್ಟೇ ಬಂಡಾಯ ಶಾಸಕರನ್ನು ಪಕ್ಷಕ್ಕೆ ಮರಳುವಂತೆ ಮನವಿ ಮಾಡಿದ ವಿಡಿಯೊ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.