ADVERTISEMENT

ಎಚ್‌ಸಿಕ್ಯು, ಅಜಿಥ್ರೊಮೈಸಿನ್‌ ಜೀವಕ್ಕೆ ಮಾರಕ: ಅಧ್ಯಯನ

ಪಿಟಿಐ
Published 26 ಮೇ 2020, 20:05 IST
Last Updated 26 ಮೇ 2020, 20:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ಪ್ರಸ್ತಾಪಿಸಿರುವ ಹೈಡ್ರಾಕ್ಸಿಕ್ಲೋರೊಕ್ವಿನ್‌ ಹಾಗೂ ಅಜಿಥ್ರೊಮೈಸಿನ್‌ ಮಾತ್ರೆಗಳು ಜೀವಕ್ಕೆ ಮಾರಕವಾಗಿದ್ದು, ಹೃದಯ ಹಾಗೂ ರಕ್ತನಾಳಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಈ ಮಾತ್ರೆಗಳನ್ನು ಸೇವಿಸಿ ಅಡ್ಡಪರಿಣಾಮ ಎದುರಿಸಿದ 2.1 ಕೋಟಿ ಪ್ರಕರಣಗಳ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದತ್ತಾಂಶಗಳನ್ನು ವಿಶ್ಲೇಷಣೆ ನಡೆಸಿರುವ ವ್ಯಾಂಡರ್‌ಬಿಲ್ಟ್‌ ವಿಶ್ವವಿದ್ಯಾಲಯ ಹಾಗೂ ಸ್ಟ್ಯಾಂಫರ್ಡ್‌ ವಿಶ್ವವಿದ್ಯಾಲಯ ಈ ವರದಿ ನೀಡಿದೆ.

130 ರಾಷ್ಟ್ರಗಳಲ್ಲಿ 1967 ನವೆಂಬರ್‌ 14ರಿಂದ 2020 ಮಾರ್ಚ್‌ 1ರವರೆಗೆ ದಾಖಲಾಗಿರುವ ಪ್ರಕರಣಗಳು ಇದರಲ್ಲಿ ದಾಖಲಾಗಿವೆ.‘ಸರ್ಕ್ಯುಲೇಷನ್‌’ ಹೆಸರಿನ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದ್ದು, ಹೈಡ್ರಾಕ್ಸಿಕ್ಲೋರೊಕ್ವಿನ್‌, ಅಜಿಥ್ರೊಮೈಸಿನ್‌ ಮಾತ್ರೆ ಅಥವಾ ಎರಡೂ ಮಾತ್ರೆಗಳನ್ನು ಜೊತೆಯಾಗಿ ತೆಗೆದುಕೊಂಡಾಗ ಹೃದಯದ ಮೇಲೆ ಉಂಟಾದ ಅಡ್ಡಪರಿಣಾಮ ಹಾಗೂ ಇತರೆ ಹೃದಯದ ಕಾಯಿಲೆಗೆ ಇರುವ ಇತರೆ ಮಾತ್ರೆಗಳನ್ನು ತೆಗೆದುಕೊಂಡಾಗ ಆದ ಪರಿಣಾಮಗಳನ್ನು ಹೋಲಿಸಲಾಗಿದೆ.

ADVERTISEMENT

ಈ ಮಾತ್ರೆಗಳನ್ನು ಸೇವಿಸಿದಾಗ ಹೃದಯಬಡಿತದಲ್ಲಿ ಅಸಹಜ ಬದಲಾವಣೆ ಕಂಡು ಬಂದಿದೆ. ಎರಡೂ ಮಾತ್ರೆಗಳನ್ನು ಜೊತೆಯಾಗಿ ಸೇವಿಸಿದಾಗ ಇದರ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ನಿರಂತರವಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್‌ ಸೇವಿಸಿದರೆ ಹೃದಯಾಘಾತವಾಗುವ ಎಚ್ಚರಿಕೆಯನ್ನೂ ವಿಜ್ಞಾನಿಗಳು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.