ನವದೆಹಲಿ: ಪಕ್ಷ ತೊರೆಯುತ್ತಾರೆ ಎಂಬ ಊಹಾಪೋಹಗಳನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ಮನೀಶ್ ತಿವಾರಿ ತಳ್ಳಿ ಹಾಕಿದ್ದಾರೆ. ‘ನಾನು ಪಕ್ಷದಲ್ಲಿ ಬಾಡಿಗೆದಾರನಲ್ಲ, ಪಾಲುದಾರ’ಎಂದು ಹೇಳಿದ್ಧಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾನು ಬಾಡಿಗೆದಾರನಲ್ಲ, ಪಾಲುದಾರ ಎಂದು ಹೇಳಿದ್ದಾರೆ.
‘ಆದರೆ, ಯಾರಾದರೂ ನನ್ನನ್ನು ಪಕ್ಷದಿಂದ ಹೊರಗೆ ತಳ್ಳಿದರೆ, ಅದು ಬೇರೆ ವಿಷಯ. ನಾನು ನನ್ನ ಜೀವನದ 40 ವರ್ಷಗಳನ್ನು ಈ ಪಕ್ಷಕ್ಕಾಗಿ ನೀಡಿದ್ದೇನೆ’ ಎಂದಿದ್ದಾರೆ.
ಈ ವಾರದ ಆರಂಭದಲ್ಲಿ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಮನೀಶ್ ತಿವಾರಿ, ಪಕ್ಷದಲ್ಲಿ ಆಂತರಿಕ ಸುಧಾರಣೆಗೆ ಒತ್ತಾಯಿಸಿದ್ದರು. ಕೆಲ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷ ಬಿಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅವರು, ಅಂತಹ ಸ್ಥಿತಿ ಬಂದಾಗ ಗಡಿ ದಾಟುವೆ ಎಂದು ಹೇಳಿದ್ದರು.
ಒಬ್ಬ ಚಿಕ್ಕ ಕಾರ್ಯಕರ್ತ ಕಾಂಗ್ರೆಸ್ ತೊರೆದರೂ ಕಾಂಗ್ರೆಸ್‌ಗೆ ನಷ್ಟವಾಗಲಿದೆ. ಹಿರಿಯ ನಾಯಕರು ಪಕ್ಷ ತೊರೆದರೆ ಅಪಾರ ನಷ್ಟವಾಗುತ್ತದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.