ದಿಬ್ರೂಗಢ: ಸಿಖ್ ಮೂಲಭೂತವಾದಿ ಧರ್ಮಪ್ರಚಾರಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್, ‘ಜೈಲಿನಲ್ಲಿ ಅತ್ಯುತ್ಸಾಹದಿಂದ ಇದ್ದೇನೆ’ ಎಂದು ತನ್ನ ವಕೀಲರಿಗೆ ಪತ್ರ ಬರೆದಿದ್ದಾರೆ.
ವಕೀಲ ಭಗವಂತ್ ಸಿಂಗ್ ಸಿಯಾಲ್ಕಾ ಅವರು ಈ ವಿಷಯ ತಿಳಿಸಿದರು. ಬಂಧನಕ್ಕೊಳಗಾಗಿರುವ ವಾರಿಸ್ ಪಂಜಾಬ್ ದೇ ಕಾರ್ಯಕರ್ತರ ಸಂಬಂಧಿಕರ ಜೊತೆಗೆ ಇಲ್ಲಿಗೆ ಬಂದಿದ್ದ ಅವರು ಜೈಲಿನಲ್ಲಿ ಬಂಧಿತರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಅಮೃತಪಾಲ್ ಸಿಂಗ್ ವಕೀಲರಿಗೆ ಪತ್ರ ನೀಡಿದ್ದು, ‘ದೇವರ ಅನುಗ್ರಹದಿಂದ ನಾನು ಇಲ್ಲಿ ಅತ್ಯುತ್ಸಾಹದಿಂದ ಇದ್ದೇನೆ’ ಎಂದು ತಿಳಿಸಿದ್ದಾರೆ.
ಸಂಘಟನೆಯ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಪಂಜಾಬ್ ಸರ್ಕಾರವು ಸಿಖ್ಖರ ವಿರುದ್ಧ ಹಲವು ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಎಂದು ತಿಳಿಸಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ಕೈಗೆತ್ತಿಗೊಳ್ಳಲು ಹಲವು ಅರ್ಹ ವಕೀಲರ ತಂಡ ರಚಿಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.