ಕೋಲ್ಕತ್ತ: ರಾಜಭವನದಲ್ಲಿ ನಿಯೋಜನೆಗೊಂಡಿರುವ ಕೋಲ್ಕತ್ತ ಪೊಲೀಸರಿಂದ ತನಗೆ ರಕ್ಷಣೆ ಸಿಗುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ದೂರಿದ್ದಾರೆ.
'ಈಗ ಕರ್ತವ್ಯದಲ್ಲಿರುವ ಅಧಿಕಾರಿ ಹಾಗೂ ಅವರ ಪೊಲೀಸ್ ತಂಡದಿಂದ ವೈಯಕ್ತಿಕ ಭದ್ರತೆಗೆ ಬೆದರಿಕೆ ಇದೆ' ಎಂದು ಅವರು ಹೇಳಿದ್ದಾರೆ.
'ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಿಳಿಸಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಅವರು ಆರೋಪಿಸಿದ್ದಾರೆ.
ರಾಜಭವನಕ್ಕೆ ನಿಯೋಜಿಸಿರುವ ಕೋಲ್ಕತ್ತ ಪೊಲೀಸರು ತಕ್ಷಣವೇ ಆವರಣ ಖಾಲಿ ಮಾಡಬೇಕೆಂದು ಆನಂದ ಬೋಸ್ ಸೂಚನೆ ನೀಡಿದ್ದರು. ಆದರೂ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರಿಂದ ಹೇಳಿಕೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.