ADVERTISEMENT

ಕಾಂಗ್ರೆಸ್‌ ಪಕ್ಷದೊಂದಿಗಿನ ಒಡನಾಟದ ಬಗ್ಗೆ ಬೇಸರವಿಲ್ಲ: ಊರ್ಮಿಳಾ ಮಾತೋಂಡ್ಕರ್‌

ಪಿಟಿಐ
Published 24 ಡಿಸೆಂಬರ್ 2020, 5:49 IST
Last Updated 24 ಡಿಸೆಂಬರ್ 2020, 5:49 IST
ಊರ್ಮಿಳಾ ಮಾತೋಂಡ್ಕರ್‌
ಊರ್ಮಿಳಾ ಮಾತೋಂಡ್ಕರ್‌   

ಮುಂಬೈ: ‘ನಾನು ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿದ್ದೆ ಎಂಬ ಬಗ್ಗೆ ನನಗೆ ಬೇಸರವಿಲ್ಲ. ಆ ಪಕ್ಷದ ನಾಯಕತ್ವದ ಬಗ್ಗೆ ನನಗೆ ಗೌರವವಿದೆ’ ಎಂದು ಬಾಲಿವುಡ್‌ ನಟಿ, ಶಿವಸೇನಾ ನಾಯಕಿ ಊರ್ಮಿಳಾ ಮಾತೋಂಡ್ಕರ್‌ ಅವರು ಹೇಳಿದರು.

ಮಹಾ ವಿಕಾಸ್‌ ಅಘಾಡಿ(ಎಂಎಚ್‌ಎ) ಸರ್ಕಾರವು ಒಂದು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರವು ಉತ್ತಮವಾಗಿ ಕೆಲಸ ಮಾಡಿದೆ. ಕೋವಿಡ್‌–19 ಪರಿಸ್ಥಿತಿಯಲ್ಲೂ ಜನರ ಬಗ್ಗೆ ಕಾಳಜಿ ವಹಿಸಿದೆ ಎಂದರು.

‘ನಾನು ಜನರ ನಟಿಯಾಗಿದ್ದೆ. ಈಗ ಜನರ ರಾಜಕಾರಣಿಯಾಗಲು ಪರಿಶ್ರಿಮಿಸುತ್ತೇನೆ. ನಾನು ಕೇವಲ ಎ.ಸಿ ಕೊಠಡಿಯಲ್ಲಿ ಕುಳಿತು, ಟ್ವೀಟ್‌ ಮಾಡುವಂತಹ ನಾಯಕಿಯಾಗಲು ಇಚ್ಛಿಸುವುದಿಲ್ಲ. ನನಗೆ ಯಾವ ಕೆಲಸ ಮಾಡಬೇಕು ಮತ್ತು ಆ ಕೆಲಸವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿದಿದೆ’ ಎಂದು ಅವರು ಹೇಳಿದರು.

ADVERTISEMENT

‘ನಾನು ಆರು ತಿಂಗಳಿಗಿಂತ ಕಡಿಮೆ ಕಾಲ ಕಾಂಗ್ರೆಸ್‌ನಲ್ಲಿದ್ದೆ. ಲೋಕಸಭಾ ಚುನಾವಣಾ ಪ್ರಚಾರದ 28 ದಿನಗಳು ನನಗೆ ಮಧುರ ನೆನಪುಗಳನ್ನು ನೀಡಿವೆ’ ಎಂದು ಅವರು ಅಭಿಪ್ರಾಯಪಟ್ಟರು.

2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಊರ್ಮಿಳಾ ಅವರು ಕಾಂಗ್ರೆಸ್‌ನಿಂದ ಉತ್ತರ ಮುಂಬೈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಬಳಿಕ ಡಿಸೆಂಬರ್‌ 1 ರಂದು ಕಾಂಗ್ರೆಸ್‌ ತೊರೆದು, ಶಿವಸೇನಾಗೆ ಸೇರ್ಪಡೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.