ADVERTISEMENT

Wayand By poll | 35 ವರ್ಷಗಳ ರಾಜಕೀಯ ಅನುಭವವಿದೆ: BJP ಅಭ್ಯರ್ಥಿಗೆ ಪ್ರಿಯಾಂಕಾ

ಪಿಟಿಐ
Published 23 ಅಕ್ಟೋಬರ್ 2024, 9:51 IST
Last Updated 23 ಅಕ್ಟೋಬರ್ 2024, 9:51 IST
<div class="paragraphs"><p>ನವ್ಯಾ ಹರಿದಾಸ್ ಮತ್ತು ಪ್ರಿಯಾಂಕಾ ಗಾಂಧಿ  </p></div>

ನವ್ಯಾ ಹರಿದಾಸ್ ಮತ್ತು ಪ್ರಿಯಾಂಕಾ ಗಾಂಧಿ

   

ವಯನಾಡ್: ‘17ನೇ ವಯಸ್ಸಿನಿಂದಲೇ ರಾಜಕೀಯ ಪ್ರಚಾರಗಳಲ್ಲಿ ಭಾಗವಹಿಸುತ್ತಾ ಬಂದಿದ್ದು, ರಾಜಕೀಯದಲ್ಲಿ ನನಗೆ 35 ವರ್ಷಗಳ ಅನುಭವವಿದೆ’ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಪ್ರತಿಸ್ಪರ್ಧಿ ಬಿಜೆಪಿಯ ನವ್ಯಾ ಹರಿದಾಸ್‌ ಅವರಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

‘ಜನರನ್ನು ಪ್ರತಿನಿಧಿಸುವ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿಗಿಂತ ಹೆಚ್ಚಿನ ಅನುಭವ ನನಗಿದೆ’ ಎಂದು ನವ್ಯಾ ಹರಿದಾಸ್‌ ಮಂಗಳವಾರ ಹೇಳಿದ್ದರು.

ADVERTISEMENT

ನಾಮಪತ್ರ ಸಲ್ಲಿಸುವ ಮುನ್ನ ಕಲ್ಪೇಟಾದಲ್ಲಿ ನಡೆದ ರೋಡ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ, ‘1989ರಲ್ಲಿ ಮೊದಲ ಬಾರಿಗೆ ನನ್ನ ತಂದೆ ರಾಜೀವ್‌ ಗಾಂಧಿ ಅವರ ಪರ ನಾನು ಮತಯಾಚಿಸಿದ್ದೇನೆ. ಆಗ ನನಗೆ 17 ವರ್ಷ ವಯಸ್ಸಾಗಿತ್ತು. 35 ವರ್ಷಗಳಿಂದ ರಾಜಕೀಯ ಪ್ರಚಾರಗಳಲ್ಲಿ ಭಾಗವಹಿಸುತಿದ್ದು, ನನ್ನ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರ ಪರ ಮತಯಾಚಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ವಯನಾಡಿನ ಜನರು ತೋರಿಸಿದ ಧೈರ್ಯ ಕಂಡು ಅಚ್ಚರಿಯಾಗಿತ್ತು. ಅಂತಹ ಜನರನ್ನು ಪ್ರತಿನಿಧಿಸುವುದು ಗೌರವದ ಸಂಗತಿಯಾಗಿದೆ’ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ವಿರುದ್ಧ ಆಡಳಿತಾರೂಢ ಎಲ್‌ಡಿಎಫ್‌ನಿಂದ ಸತ್ಯನ್ ಮೊಕೇರಿ ಮತ್ತು ಬಿಜೆಪಿಯಿಂದ ನವ್ಯಾ ಹರಿದಾಸ್ ಕಣದಲ್ಲಿದ್ದಾರೆ.

ವಯನಾಡ್‌ ಉಪಚುನಾವಣೆಗೆ ನವೆಂಬರ್ 13ರಂದು ಮತದಾನ ನಡೆಯಲಿದೆ. ನ. 23ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.