ADVERTISEMENT

ಬಿಜೆಪಿ ಜೊತೆಗಿನ ಮೈತ್ರಿ ಶಾಶ್ವತ: ನಿತೀಶ್‌ ಕುಮಾರ್‌

ಪಿಟಿಐ
Published 8 ಫೆಬ್ರುವರಿ 2024, 17:45 IST
Last Updated 8 ಫೆಬ್ರುವರಿ 2024, 17:45 IST
<div class="paragraphs"><p>ನಿತೀಶ್‌ ಕುಮಾರ್‌</p></div>

ನಿತೀಶ್‌ ಕುಮಾರ್‌

   

ಪಟ್ನಾ (ಪಿಟಿಐ): ‘ನಾನು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಕೆಲಕಾಲ ದೂರವಿದ್ದೆ. ಈಗ ಅಲ್ಲಿಗೇ ಮರಳಿದ್ದೇನೆ. ಈ ಮೈತ್ರಿಕೂಟದಲ್ಲೇ ಮುಂದುವರಿಯಲಿದ್ದೇನೆ. ಇದು ಶಾಶ್ವತ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಗುರುವಾರ ಹೇಳಿದರು. 

ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಬಿಜೆಪಿಯ ಪ್ರಮುಖ ನಾಯಕರನ್ನು ಬುಧವಾರ ಭೇಟಿಯಾಗಿ ಅವರು ಮಾತುಕತೆ ನಡೆಸಿದ್ದರು. ಬಿಹಾರಕ್ಕೆ ವಾಪಸ್ಸಾದ ಬಳಿಕ ನಿತೀಶ್‌ ಅವರು ಸುದ್ದಿಗಾರರ ಎದುರು ಮಾತನಾಡಿದರು.

ADVERTISEMENT

ಫೆಬ್ರುವರಿ 12ರಂದು ನಡೆಯಲಿರುವ ವಿಶ್ವಾಸಮತ ಯಾಚನೆ ಕುರಿತು ಆತಂಕಗೊಂಡಿದ್ದೀರಾ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷ ಮತ್ತು ಮಿತ್ರಪಕ್ಷದ ನಾಯಕರ ಜೊತೆ ಎಲ್ಲವನ್ನೂ ಚರ್ಚಿಸಲಾಗಿದೆ. ಯಾವುದೇ ಆತಂಕವಿಲ್ಲ’ ಎಂದರು.

ಬಿಹಾರಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್‌ ಮತ್ತು ವಿಶೇಷ ವರ್ಗ ಸ್ಥಾನಮಾನವನ್ನು ನೀಡುವಂತೆ ಕೇಂದ್ರವನ್ನು ಅವರು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು. ಪ್ರಧಾನಿ ಭೇಟಿ ವೇಳೆ ಈ ನಿಟ್ಟಿನಲ್ಲಿ ಚರ್ಚೆ ನಡೆಯಿತೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಅವರು, ‘ಬಿಹಾರದ ಅಭಿವೃದ್ಧಿಗಾಗಿ ನಾನು 2005ರಿಂದಲೂ ಕೆಲಸ ಮಾಡುತ್ತಿದ್ದೇನೆ. ಯಾವ ವಿಚಾರದ ಕುರಿತೂ ಆತಂಕ ಬೇಡ, ಎಲ್ಲವನ್ನೂ ಚರ್ಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.