ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಅತಿಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣದ ಶಂಕಿತರಿಂದ ಶೆಲ್ ಕಂಪನಿ ಮೂಲಕ ಉದ್ಯಮಿ ರತುಲ್ ಪುರಿ ಪಡೆದಿದ್ದಾರೆ ಎನ್ನಲಾದ ₹254 ಕೋಟಿ ಮೊತ್ತದ ಬೇನಾಮಿ ಷೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.
ಹಿಂದೂಸ್ತಾನ್ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿ.(ಎಚ್‌ಪಿಪಿ) ಅಧ್ಯಕ್ಷ ರತುಲ್ ಪುರಿ, ಮಧ್ಯಪ್ರದೇಶದ ಸಿ.ಎಂ ಕಮಲನಾಥ್ ಅವರ ಸೋದರ ಸಂಬಂಧಿ. ತೆರಿಗೆ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಪುರಿ ಅವರ ಮೇಲೆ ತೆರಿಗೆ ಇಲಾಖೆ ಮತ್ತು ಇ.ಡಿ ನಿಗಾ ಇಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.