ADVERTISEMENT

'ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ': UP ಶಾಸಕನಿಗೆ ವ್ಯಕ್ತಿಯ ಮನವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 7:28 IST
Last Updated 18 ಅಕ್ಟೋಬರ್ 2024, 7:28 IST
<div class="paragraphs"><p>ಮದುವೆ ಮಾಡಿಸುವಂತೆ&nbsp;ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಮನವಿ ಮಾಡಿದ&nbsp; ವ್ಯಕ್ತಿ</p></div>

ಮದುವೆ ಮಾಡಿಸುವಂತೆ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಮನವಿ ಮಾಡಿದ  ವ್ಯಕ್ತಿ

   

(ಚಿತ್ರ ಕೃಪೆ– FB/Brijbhushan Rajput)

ಲಖನೌ: 'ನಾನು ನಿಮಗೆ ಮತ ಹಾಕಿದ್ದೇನೆ, ನೀವು ನನಗೆ ಮದುವೆ' ಮಾಡಿಸಿ ಎಂದು ವ್ಯಕ್ತಿಯೊಬ್ಬ ಶಾಸಕನಿಗೆ ಮನವಿ ಮಾಡಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಮಹೋಬಾದ ಪೆಟ್ರೋಲ್ ಬಂಕ್‌ ಉದ್ಯೋಗಿಯೊಬ್ಬ, ಚರಖಾರಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಈ ರೀತಿ ಮನವಿ ಮಾಡಿದ್ದಾರೆ. ಈ ವಿಡಿಯೊವನ್ನು ಸ್ವತಃ ಶಾಸಕರೇ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಶಾಸಕ ಬ್ರಿಜ್‌ಭೂಷಣ್ ರಜಪೂತ್ ಅವರು ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ತೆರಳಿದ್ದರು. ಆಗ ಅವರ ಬಳಿ ಬಂದ ಪೆಟ್ರೋಲ್ ಬಂಕ್‌ ಉದ್ಯೋಗಿ ಅಖಿಲೇಂದ್ರ ಖರೆ (44) ನನಗೆ ಇನ್ನೂ ಮದುವೆಯಾಗಿಲ್ಲ. ಹುಡುಗಿ ಹುಡುಕಿ ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಜಪೂತ್, ಬೇರೆ ಯಾರ ಬಳಿಯಾದರೂ ಈ ರೀತಿಯಾಗಿ ಮನವಿ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಮಹೋಬದ ಶಾಸಕ ರಾಕೇಶ್ ಕುಮಾರ್ ಗೋಸ್ವಾಮಿ ಅವರ ಬಳಿ ಮನವಿ ಮಾಡಿದ್ದೆ. ಆದರೆ ಪ್ರಯೋಜನವಾಗಿಲ್ಲ ಎಂದು ಅಖಿಲೇಂದ್ರ ಉತ್ತರಿಸಿದ್ದಾರೆ.

ಆಗ ಶಾಸಕ ರಜಪೂತ್, ನಿಮಗೆ ಯಾವ ರೀತಿಯ ಹುಡುಗಿ ಬೇಕು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಖಿಲೇಂದ್ರ ಖರೆ ಅವರು, ತನಗೆ ನಿರ್ದಿಷ್ಟ ಸಮುದಾಯದ ಮಹಿಳೆ ಅವಶ್ಯಕತೆ ಇಲ್ಲ ಎಂದಿದ್ದಾರೆ.

ನಿಮಗಾಗಿ ವಧುವನ್ನು ಹುಡುಕಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ ಶಾಸಕ ರಜಪೂತ್‌, ಅವರ ಸಂಬಳದ ಬಗ್ಗೆಯೂ ವಿಚಾರಿಸಿದ್ದಾರೆ, ತಿಂಗಳಿಗೆ ₹6 ಸಾವಿರ ಸಂಬಳ ಹಾಗೂ ಭೂಮಿ ಕೂಡ ಇದೆ ಹೇಳಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.