ADVERTISEMENT

‘ನಮ್ಮವರಿಂದಲೇ ದ್ರೋಹ’: ಸಂಪುಟ ಸಭೆಯಲ್ಲಿ ಠಾಕ್ರೆ ವಿದಾಯ ಭಾಷಣ

ಪಿಟಿಐ
Published 29 ಜೂನ್ 2022, 19:57 IST
Last Updated 29 ಜೂನ್ 2022, 19:57 IST
ಬಂಡಾಯ ಶಾಸಕ ಏಕನಾಥ ಶಿಂಧೆ ಹಾಗೂ ಅವರ ತಂಡ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಬುಧವಾರ ಭೇಟಿ ಪೂಜೆ ಸಲ್ಲಿಸಿತು–ಪಿಟಿಐ ಚಿತ್ರ
ಬಂಡಾಯ ಶಾಸಕ ಏಕನಾಥ ಶಿಂಧೆ ಹಾಗೂ ಅವರ ತಂಡ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಬುಧವಾರ ಭೇಟಿ ಪೂಜೆ ಸಲ್ಲಿಸಿತು–ಪಿಟಿಐ ಚಿತ್ರ   

ಮುಂಬೈ: ಶಿವಸೇನಾ ಹಿರಿಯ ನಾಯಕ ಏಕನಾಥ ಶಿಂಧೆ ಬಂಡಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಉದ್ಧವ್ ಠಾಕ್ರೆ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ.ರಾಜೀನಾಮೆಗೂ ಮುನ್ನ ಸಂಪುಟ ಸಭೆ ನಡೆಸಿದ ಠಾಕ್ರೆ ಅವರು,‘ನನ್ನ ಜನರೇ ನನಗೆ ದ್ರೋಹ ಬಗೆದರು’ ಎಂದು ಸಂಪುಟ ಸಹೋದ್ಯೋಗಿಗಳ ಎದುರು ಹೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಯಲ್ಲಿ ವಿದಾಯ ಭಾಷಣ ಮಾಡಿದ್ದ ಅವರು, ‘ಉದ್ದೇಶವಿಲ್ಲದೇ ಯಾರಿಗಾದರೂ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿ’ ಎಂದು ಸಹೋದ್ಯೋಗಿಗಳಲ್ಲಿ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ. ಎರಡೂವರೆ ವರ್ಷಗಳ ಕಾಲ ಸಹಕಾರ ನೀಡಿದ ಸಂಪುಟ ಸದಸ್ಯರಿಗೆ
ಠಾಕ್ರೆ ಧನ್ಯವಾದ ಹೇಳಿದರು. ಉದ್ಧವ್ ಮಾತನಾಡಿದ ಬಳಿಕ ಸಚಿವರು ಚಪ್ಪಾಳೆ ತಟ್ಟಿದರು ಎಂದು ಮೂಲಗಳು ತಿಳಿಸಿವೆ.

ಗೋವಾಗೆ ಬಂದ ಬಂಡಾಯ ಶಾಸಕರು: ಬಂಡಾಯ ಶಾಸಕರು ಅಸ್ಸಾಂನಿಂದ ಗೋವಾಗೆ ಬಂದಿದ್ದಾರೆ. ವಿಮಾನ ನಿಲ್ದಾಣ ಹಾಗೂ ಅವರು ತಂಗಲಿರುವ ಪಣಜಿಯ ಪಂಚತಾರಾ ಹೋಟೆಲ್‌ಗೆ ಭದ್ರತೆ ಕಲ್ಪಿಸಲಾಗಿದೆ. ಶಾಸಕರಿಗಾಗಿ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.