ADVERTISEMENT

13 ಮಂದಿ ಇದ್ದ ವಾಯುಪಡೆ ವಿಮಾನ ನಾಪತ್ತೆಯಾಗಿ ಇಂದಿಗೆ 8 ದಿನ

ಏಜೆನ್ಸೀಸ್
Published 12 ಜೂನ್ 2019, 1:18 IST
Last Updated 12 ಜೂನ್ 2019, 1:18 IST
   

ನವದೆಹಲಿ: ಹದಿಮೂರು ಮಂದಿ ಇದ್ದ ಭಾರತೀಯ ವಾಯುಪಡೆಯ ಸರಕು ಸಾಗಾಣೆ ವಿಮಾನ ಎಎನ್‌–32 ಕಾಣೆಯಾಗಿ ಇಂದಿಗೆ 8 ದಿನಗಳಾಗಿದ್ದು, ಈ ವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆಸೋಮವಾರ ಟ್ವೀಟ್‌ ಮಾಡಿರುವ ಭಾರತೀಯ ವಾಯು ಪಡೆ ಪತ್ತೆ ಕಾರ್ಯ ಮುಂದುವರಿಸಿರುವುದಾಗಿ ಹೇಳಿದೆ.

ಕಳೆದ ಸೋಮವಾರ 13ಮಂದಿ ಸೇನಾ ಸಿಬ್ಬಂದಿಯನ್ನು ಹೊತ್ತ ವಿಮಾನವು ಅರುಣಾಚಲ ಪ್ರದೇಶದ ಮೆನ್‌ಚುಕಾಗೆ ತೆರಳಲುಅಸ್ಸಾಂನ ಜೊರ್ಹತ್‌ ವಾಯುನೆಲೆಯಿಂದ ಮಧ್ಯಾಹ್ನ 12.27ಕ್ಕೆ ಟೇಕಾಫ್‌ ಆಗಿತ್ತು. ಆದರೆ, 1 ಗಂಟೆ ಹೊತ್ತಿಗೆ ಅದು ನಿಯಂತ್ರಣ ಕಳೆದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ವಾಯುಪಡೆ, ಭೂಸೇನೆ, ಸ್ಥಳೀಯ ಪೊಲೀಸರು, ರಾಜ್ಯ ಸರ್ಕಾರ, ಅರೆ ಸೇನಾ ಪಡೆ, ಸ್ಥಳೀಯರು ವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಈ ವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಮಧ್ಯೆ ವ್ಯತಿರಿಕ್ತಹವಾಮಾನ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಸೋಮವಾರ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ.ಕಾಣೆಯಾದವರ ಕುಟುಂಬಗಳಿಗೆ ವಾಯುಪಡೆಯು ಈಗಾಗಲೇ ₹5 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ADVERTISEMENT

ಹೆಲಿಕಾಪ್ಟರ್‌ಗಳು ಮತ್ತು ಸಿ–130ಎಸ್‌ ವಿಮಾನಗಳ ಮೂಲಕ ವೈಮಾನಿಕ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೇನೆ ಮತ್ತು ಯೋಧರ ವಿಚಾರಗಳು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿವೆ.ಆದರೆ, ಈ ವಿಮಾನ ಕಾಣೆಯಾದ ವಿಚಾರ ಹೆಚ್ಚು ಸುದ್ದಿಯಾಗಲೇ ಇಲ್ಲ. ರಾಜಕೀಯ ಪಕ್ಷಗಳು, ಮುಖಂಡರು, ಸರ್ಕಾರಗಳೂ ಈ ಬಗ್ಗೆ ಮಾತನಾಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.