ADVERTISEMENT

ಕಾರ್ಯಾಚರಣೆ ಸನ್ನದ್ಧತೆ ವೃದ್ಧಿಗೆ ನಿರ್ಣಾಯಕ ವಿಶ್ಲೇಷಣೆ ಅಗತ್ಯ: ಬದೌರಿಯಾ

ಪಿಟಿಐ
Published 17 ಸೆಪ್ಟೆಂಬರ್ 2021, 8:18 IST
Last Updated 17 ಸೆಪ್ಟೆಂಬರ್ 2021, 8:18 IST
ಆರ್‌.ಕೆ.ಎಸ್‌ ಬದೌರಿಯಾ
ಆರ್‌.ಕೆ.ಎಸ್‌ ಬದೌರಿಯಾ   

ನವದೆಹಲಿ: ‘ಕಾರ್ಯಾಚರಣೆ ಸನ್ನದ್ಧತೆಯನ್ನು ಹೆಚ್ಚಿಸಲು ನಿರ್ಣಾಯಕ ವಿಶ್ಲೇಷಣೆಯ ಅವಶ್ಯಕತೆಯಿದೆ. ಜತೆಗೆ, ಅಭ್ಯಾಸಗಳ ನಿರ್ವಹಣೆ ಮತ್ತು ದೃಢವಾದ ದೈಹಿಕ ಹಾಗೂ ಸೈಬರ್‌ ಭದ್ರತೆಯ ಬಗ್ಗೆ ಗಮನವಹಿಸಬೇಕು’ ಎಂದು ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌ ಬದೌರಿಯಾ ಹೇಳಿದರು.

ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿರುವ ಭಾರತೀಯ ವಾಯುಪಡೆಯ(ಐಎಎಫ್‌) ಸೆಂಟ್ರಲ್‌ ಏರ್‌ ಕಮಾಂಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಎಲ್ಲಾ ವಿಭಾಗಗಳು ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ಸ್ವತ್ತುಗಳ ಸನ್ನದ್ಧತೆಯನ್ನು ಅತ್ಯುನ್ನತ ಮಟ್ಟದಲ್ಲಿ ಇರಿಸಬೇಕೆಂದು ಬದೌರಿಯಾ ನಿರ್ದೇಶನ ನೀಡಿರುವುದಾಗಿ ಐಎಎಫ್‌ ಹೇಳಿಕೆ ಬಿಡುಗಡೆ ಮಾಡಿದೆ.

ಐಎಎಫ್‌ನ ಯುದ್ಧ ಸಾಮರ್ಥ್ಯವನ್ನು ನವೀನತೆ, ಸ್ವಾವಲಂಬನೆ ಮೂಲಕ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.