ADVERTISEMENT

ಅತ್ಯಾಚಾರ ಆರೋಪ: ವಿಂಗ್ ಕಮಾಂಡರ್‌ಗೆ ಶೋಕಾಸ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 0:15 IST
Last Updated 5 ಅಕ್ಟೋಬರ್ 2024, 0:15 IST
-
-   

ನವದೆಹಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ವಿಂಗ್‌ ಕಮಾಂಡರ್‌, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂಬುದಾಗಿ ವಿಚಾರಣಾ ನ್ಯಾಯಾಲಯ ಹೇಳಿದ ಬೆನ್ನಲ್ಲೇ, ಅಧಿಕಾರಿಗೆ ವಾಯುಪಡೆ ಶೋಕಾಸ್‌ ನೋಟಿಸ್‌ ನೀಡಿದೆ.

ಅಂಬಾಲಾದಲ್ಲಿನ ವಾಯುನೆಲೆಯಲ್ಲಿ ಕರ್ತವ್ಯದಲ್ಲಿರುವ ವಿಂಗ್‌ ಕಮಾಂಡರ್‌ಗೆ ಗುರುವಾರ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ವಿಂಗ್ ಕಮಾಂಡರ್‌ ತನ್ನ ಮೇಲೆ ಕಳೆದ ವರ್ಷ ನವೆಂಬರ್‌ನಲ್ಲಿ ಅತ್ಯಾಚಾರ ಎಸಗಿದ್ದರು ಎಂದು ದೆಹಲಿಯ ಪಾಲಂನಲ್ಲಿರುವ ಇನ್ಸ್‌ಟಿಟ್ಯೂಟ್‌ ಆಫ್‌ ಏರೋಸ್ಪೇಸ್ ಸೇಫ್ಟಿಯಲ್ಲಿ ತರಬೇತಿ ಪಡೆಯುತ್ತಿದ್ದ 25 ವರ್ಷದ ಮಹಿಳೆ ಆರೋಪಿಸಿದ್ದಾರೆ.

ADVERTISEMENT

ವಿಂಗ್‌ ಕಮಾಂಡರ್ ವಿರುದ್ಧದ ಆರೋಪಗಳ ಕುರಿತು ವೆಸ್ಟರ್ನ್ ಏರ್‌ ಕಮಾಂಡ್‌ ಕೂಡ ತನಿಖೆ ಕೈಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.