ಗುವಾಹಟಿ: ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯ ಲುಂಥಾರಿ ಕಲ್ಲಿದ್ದಲಿನ ಅಕ್ರಮ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಭಾರತೀಯ ವಾಯುಪಡೆ ದಾವಿಸಿದೆ. ಗಣಿಯಲ್ಲಿ 15 ಕಾರ್ಮಿಕರು ಸಿಲುಕಿದ್ದಾರೆ.
ಒಡಿಶಾದ ನುರಿತ 21 ಅಗ್ನಿಶಾಮಕ ಸಿಬ್ಬಂದಿಗಳರಕ್ಷಣಾ ತಂಡ,100 ಎಚ್‌ಪಿ ಸಾಮರ್ಥ್ಯದ ಪಂಪ್‌ಗಳು ಹಾಗೂ ರಕ್ಷಣಾ ಸಾಮಗ್ರಿಗಳೊಂದಿಗೆಘಟನಾಸ್ಥಳಕ್ಕೆ ರೈಲಿನ ಮುಖಾಂತರ ತೆರಳುತ್ತಿದೆಎಂದುರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾ ಪಡೆ (ಎನ್‌ಡಿಆರ್‌ಎಫ್)ಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳವು ಗುವಾಹಟಿಯಿಂದ 200 ಕಿ.ಮೀ ದೂರದಲ್ಲಿದ್ದು ಇಂದು ಸಂಜೆ ವೇಳೆಗೆಪೂರ್ವ ಜೈಂಟಿಯಾ ನಗರವನ್ನು ತಲುಪಲಿದೆ ಎಂದುಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನುರಿತ ಅಗ್ನಿಶಾಮಕ ಸಿಬ್ಬಂದಿಗಳನ್ನು ಕಳುಹಿಸಿಕೊಡುವಂತೆ ಒಡಿಶಾ ಸರ್ಕಾರಕ್ಕೆ ಕೆಂದ್ರ ಗೃಹ ಇಲಾಖೆ ಗುರುವಾರ ಮನವಿ ಮಾಡಿತ್ತು. ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಒಡಿಶಾದ ಅಗ್ನಿಶಾಮಕ ದಳದಹಿರಿಯ ಅಧಿಕಾರಿಸುಕಾಂತ್ ಸೇಥಿ ನೇತೃತ್ವದಲ್ಲಿ ನುರಿತ ಸಿಬ್ಬಂದಿಗಳುಹಾಗೂ 20 ಪಂಪ್‌ಗಳನ್ನು ಕಳುಹಿಸಿಕೊಡಲಾಗಿದೆ ಎಂದು ಅಗ್ನಿಶಾಮಕ ದಳದ ಪ್ರಧಾನ ಮಹಾನಿರ್ದೇಶಕ ಬಿ.ಕೆ. ಶರ್ಮಾ ತಿಳಿಸಿದ್ದಾರೆ.
100 ಎಚ್‌ಪಿ ಸಾಮರ್ಥ್ಯದ ಒಂದು ಪಂಪ್ ನಿಮಿಷಕ್ಕೆ 1600 ಲೀಟರ್ ನೀರನ್ನು ಮೇಲೆತ್ತಲಿದೆ. ಗಣಿಯಲ್ಲಿ ಸಿಲುಕಿರುವ 15 ಕಾರ್ಮಿಕರನ್ನು ಶೀಘ್ರವೇ ರಕ್ಷಣೆ ಮಾಡಲಾಗುವುದು. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಮೊದಲೇ ಮನವಿ ಮಾಡಿದ್ದರೆ ಬೇಗನೆ ರಕ್ಷಣಾ ಕಾರ್ಯ ನಡೆಸಬಹುದಿತ್ತು. ಮುಂದಿನ ಎರಡು ಮೂರು ದಿನಗಳಲ್ಲಿ ರಕ್ಷಣಾ ಕಾರ್ಯವನ್ನು ಮುಗಿಸಲಾಗುವುದು ಎಂದು ಶರ್ಮಾ ಹೇಳಿದರು.
ಕೇರಳ ಪ್ರವಾಹ ಸಂದರ್ಭದಲ್ಲಿ ಇದೇ ತಂಡ ಯಶಸ್ವಿಯಾಗಿರಕ್ಷಣಾ ಕಾರ್ಯಚರಣೆಯನ್ನು ನಡೆಸಿತ್ತು ಎಂದು ಶರ್ಮಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.