ನವದೆಹಲಿ: ಸಮರ ನೌಕೆಗಳಿಂದ ಎದುರಾಗುವ ಗುರಿಗಳನ್ನು ಭೇದಿಸುವ ವಿಸ್ತರಿತ ವ್ಯಾಪ್ತಿ ಆವೃತ್ತಿಯ ಅತ್ಯಾಧುನಿಕ ಬ್ರಹ್ಮೋಸ್ ವಾಯು ಕ್ಷಿಪಣಿಯನ್ನು ಸುಖೊಯ್–30ಎಂಕೆಐ ಯುದ್ಧ ವಿಮಾನದಿಂದ ಭಾರತೀಯ ವಾಯು ಪಡೆಯು (ಐಎಎಫ್) ನಡೆಸಿದ ಪರೀಕ್ಷಾರ್ಥ ಪ್ರಯೋಗ ಗುರುವಾರ ಯಶಸ್ವಿಯಾಗಿದೆ.
‘ಬಂಗಾಳ ಕೊಲ್ಲಿಯಲ್ಲಿಹಡಗಿನಿಂದ ಎದುರಾದ ನಿಗದಿತ ಗುರಿಯ ಮೇಲೆ ಎಸ್‌ಯು–30 ಎಂಕೆಐ ಯುದ್ಧ ವಿಮಾನದಿಂದ ಹಾರಿಸಿದ ವಿಸ್ತರಿತ ವ್ಯಾಪ್ತಿ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ ನಿಖರ ದಾಳಿ ನಡೆಸಿತು.ಐಎಎಫ್, ಭಾರತೀಯ ನೌಕಾಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಬಿಎಪಿಎಲ್ ಹಾಗೂ ಎಚ್‌ಎಎಲ್‌ನ ಸಮರ್ಪಿತ ಪ್ರಯತ್ನಗಳ ಫಲವಾಗಿಉದ್ದೇಶಿತ ಯೋಜನೆ ಯಶಸ್ವಿಯಾಗಿದೆ’ ಎಂದು ಐಎಎಫ್ ತಿಳಿಸಿದೆ.
‘ಭೂಮಿ ಅಥವಾ ಸಮುದ್ರ ಮಾರ್ಗವಾಗಿ ಬರುವ ಕ್ಷಿಪಣಿಗಳನ್ನು ವಿಸ್ತರಿತ ವ್ಯಾಪ್ತಿ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ ನಿಖರವಾಗಿ ಹೊಡೆದುರುಳಿಸುತ್ತದೆ. ದೀರ್ಘ ವ್ಯಾಪ್ತಿಯ ಈ ಕ್ಷಿಪಣಿಭಾರತೀಯ ವಾಯುಪಡೆಗೆ ಮಹತ್ವದ ಬಲ ತಂದುಕೊಟ್ಟಿದೆ. ಭವಿಷ್ಯದ ಯುದ್ಧ ರಂಗಗಳಲ್ಲಿ ದೇಶದ ಸೇನೆ ಪ್ರಾಬಲ್ಯ ಸಾಧಿಸಲು ಈ ಕ್ಷಿಪಣಿ ಅನುವು ಮಾಡಿಕೊಡುತ್ತದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.