ಆಗ್ರಾ/ನವದೆಹಲಿ: ಭಾರತೀಯ ವಾಯಪಡೆಗೆ ಸೇರಿದ ಮಿಗ್–29 ಯುದ್ಧವಿಮಾನವು ಉತ್ತರಪ್ರದೇಶದ ಆಗ್ರಾದಲ್ಲಿ ಸೋಮವಾರ ಪತನಗೊಂಡಿದೆ.
‘ವಾಯುನೆಲೆಯಲ್ಲಿ ದೈನಂದಿನ ತರಬೇತಿ ವೇಳೆ ಅವಘಡ ನಡೆದಿದ್ದು, ಪೈಲಟ್‌ಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ತಾಂತ್ರಿಕ ದೋಷದಿಂದಾಗಿ ಅವಘಡ ಸಂಭವಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ಐಎಎಫ್ ‘ಎಕ್ಸ್’ ಮೂಲಕ ಮಾಹಿತಿ ನೀಡಿದೆ.
ಪತನಗೊಂಡಿರುವ ವಿಮಾನಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಸುತ್ತಮುತ್ತ ದಟ್ಟ ಹೊಗೆ ಆವರಿಸಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.