ಬೆಂಗಳೂರು: 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ‘ಐಸಿಎಐ ಸಿಎ’ ಅಂತಿಮ ಮತ್ತು ಫೌಂಡೇಶನ್ ಪರೀಕ್ಷೆಗಳ ಫಲಿತಾಂಶಗಳನ್ನು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ( ಐಸಿಎಐ) ಗುರುವಾರ ಪ್ರಕಟಿಸಿದೆ.
ಫೌಂಡೇಶನ್ ಪರೀಕ್ಷೆಗಳನ್ನು ಡಿಸೆಂಬರ್ 13, 15, 17 ಮತ್ತು 19 ರಂದು ನಡೆಸಲಾಗಿತ್ತು. ಆದರೆ ಹಳೆಯ ಮತ್ತು ಹೊಸ ಕೋರ್ಸ್‌ಗಳಿಗೆ ಅಂತಿಮ ಪರೀಕ್ಷೆಗಳನ್ನು ಡಿಸೆಂಬರ್ 5 ಮತ್ತು ಡಿಸೆಂಬರ್ 19ರ ನಡುವೆ ನಡೆಸಲಾಗಿತ್ತು.
ಫೌಂಡೇಶನ್ ಮತ್ತು ಅಂತಿಮ ಪರೀಕ್ಷೆಯ (ಹಳೆಯ ಮತ್ತು ಹೊಸ ಕೋರ್ಸ್) ಫಲಿತಾಂಶಗಳನ್ನು ವಿದ್ಯಾರ್ಥಿಗಳು icasuhiexam.icai.orgನಲ್ಲಿ ನೋಂದಾಯಿಸಿಕೊಂಡು ಪಡೆಯಬಹುದು.
ಈ ಬಾರಿ ಸಿಎ ಫೈನಲ್ ಪರೀಕ್ಷೆಯಲ್ಲಿ ಸೂರತ್‌ನ 22 ವರ್ಷದ ರಾಧಿಕಾ ಚೌತ್ಮಲ್ ಬೆರಿವಾಲಾ ಅಗ್ರಸ್ಥಾನ ಪಡೆದಿದ್ದಾರೆ.
ಸಿಎ ಅಂತಿಮ ಪರೀಕ್ಷೆಗೆ (ಹೊಸ ಕೋರ್ಸ್) 95,213 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 32,888 ಹಳೇ ಕೋರ್ಸ್‌ಗೆ ನೋಂದಾಯಿಸಿಕೊಂಡಿದ್ದರು.
ರಾಧಿಕಾ ಚೌತ್ಮಲ್ ಬೆರಿವಾಲಾ ಅವರು ಕಳೆದ ವರ್ಷ ಸೂರತ್‌ನ ಎಸ್‌ಡಿ ಜೈನ್ ಇಂಟರ್‌ನ್ಯಾಶನಲ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪೂರ್ಣಗೊಳಿಸಿದ್ದರು. ಸಿಎ ಅಂತಿಮ ಪರೀಕ್ಷೆಗಳ ಹೊಸ ವಿಧಾನದಲ್ಲಿ 800 ರಲ್ಲಿ 640 ಅಂಕಗಳನ್ನು ಗಳಿಸಿದ್ದರು. ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚಲಾಗಿದ್ದರೂ, ಬೆರಿವಾಲಾ ಆನ್‌ಲೈನ್‌ನಲ್ಲೇ ಸಿದ್ಧತೆಗಳನ್ನು ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.