ಹೈದರಾಬಾದ್: ಇಲ್ಲಿನ ಐತಿಹಾಸಿಕ ಚಾರ್‌ಮಿನಾರ್‌ನ ಒಂದು ಮಿನಾಗೆ ಹಾನಿಯಾಗಿದೆ.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಗುರುವಾರ ಸ್ಮಾರಕಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ನಂತರ ಈ ಮಾಹಿತಿ ನೀಡಿದೆ.
400 ವರ್ಷಗಳ ಇತಿಹಾಸ ಇರುವ ಚಾರ್‌ಮಿನಾರ್‌ನ ನಾಲ್ಕು ಮಿನಾರ್‌ಗಳ ದುರಸ್ತಿ ಕಾರ್ಯವನ್ನು ಇಲಾಖೆಯು ಕೆಲವು ತಿಂಗಳ ಹಿಂದೆ ಕೈಗೊಂಡಿತ್ತು. ಈಚೆಗೆ ದುರಸ್ತಿ ಮಾಡಲಾಗಿದ್ದ ಚಿಕ್ಕ ಗೋಡೆಯ ಭಾಗದಲ್ಲಿ ಹಾನಿ ಸಂಭವಿಸಿದೆ.
‘ಮಿನಾರ್‌ನಲ್ಲಿನ ಒಂದು ತುಣುಕು ಬುಧವಾರ ಕೆಳಗೆ ಬಿದ್ದಿದೆ. ಇದು ಆವರಣದಲ್ಲೇ ಬಿದ್ದಿದೆ. ಸುಣ್ಣದ ಗಾರೆಗೆ ಹಾಕಿದ್ದ ಗ್ರಾನೈಟ್‌ನ ತುಣುಕು ಗೋಡೆಗೆ ಅಂಟಿಕೊಳ್ಳದೇ ಇದ್ದರಿಂದ ಕೆಳಕ್ಕೆ ಬಿದ್ದಿರಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.