ಹೈದರಾಬಾದ್: ಇಲ್ಲಿನ ಐತಿಹಾಸಿಕ, 140 ವರ್ಷದಷ್ಟು ಹಳೆಯದಾದ ಸಿಕಂದರಾಬಾದ್ ಕ್ಲಬ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪ್ರವೇಶ ಭಾಗವು ಸೇರಿದಂತೆ ಭಾಗಶಃ ಸುಟ್ಟುಭಸ್ಮವಾಗಿದೆ.
ಕ್ಲಬ್ 1878ರಲ್ಲಿ ಸ್ಥಾಪನೆಯಾಗಿದ್ದು, 22 ಎಕರೆ ವ್ಯಾಪ್ತಿಯಲ್ಲಿದೆ. ಈ ವರ್ಣರಂಜಿತ ಸಂಕೀರ್ಣಕ್ಕೆ ಪಾರಂಪರಿಕ ಕಟ್ಟಡ ಎಂಬ ಹಣೆಪಟ್ಟಿಯಿದೆ. ಹೈದರಾಬಾದ್, ಸಿಕಂದರಾಬಾದ್‌ನ ಪ್ರಮುಖರು ಈ ಕ್ಲಬ್‌ಗೆ ಭೇಟಿ ನೀಡುತ್ತಿದ್ದರು.
ಪೊಲೀಸರಿಗೆ ಈ ಕುರಿತು ನೀಡಿರುವ ದೂರಿನಲ್ಲಿ ಕ್ಲಬ್‌ನ ಅಧ್ಯಕ್ಷ ರಘುರಾಂ ರೆಡ್ಡಿ ಅವರು, ಬೆಂಕಿಯ ಜ್ವಾಲೆ ಕಟ್ಟಡವನ್ನು ಆವರಿಸಿದ್ದು, ಅವಘಡದಿಂದ ಅಂದಾಜು ₹ 25 ಕೋಟಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಬಹುತೇಕ ಹಿರಿಯ ಸದಸ್ಯರು, ಸಾಂಸ್ಕೃತಿಕವಾಗಿ ಆಗಿರುವ ನಷ್ಟ ಅದಕ್ಕೂ ಹೆಚ್ಚಿನದು ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.