ADVERTISEMENT

ಐಸಿಎಸ್‌ಇ, ಐಎಸ್‌ಸಿ: ಪರೀಕ್ಷಾ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 20:18 IST
Last Updated 3 ಡಿಸೆಂಬರ್ 2018, 20:18 IST
   

ನವದೆಹಲಿ: ಇಂಡಿಯನ್‌ ಸರ್ಟಿಫಿಕೆಟ್‌ ಆಫ್‌ ಸೆಕಂಡರಿ ಎಜುಕೇಶನ್‌ (ಐಸಿಎಸ್‌ಇ) ಪಠ್ಯಕ್ರಮದ 10ನೇ ತರಗತಿ ಮತ್ತು ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ (ಐಎಸ್‌ಸಿ) ಪಠ್ಯಕ್ರಮದ 12ನೇ ತರಗತಿ ಪರೀಕ್ಷೆಗಳು ಫೆಬ್ರುವರಿಯಿಂದ ಆರಂಭವಾಗಲಿವೆ.

ಕೌನ್ಸಿಲ್‌ ಫಾರ್‌ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ ಎಕ್ಸಾಮಿನೇಷನ್ಸ್‌ (ಸಿಐಎಸ್‌ಸಿಇ) ಸೋಮವಾರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಸುಮಾರು ಒಂದು ತಿಂಗಳ ಕಾಲ ಪರೀಕ್ಷೆ ನಡೆಯಲಿವೆ.

2019ರ ಫೆಬ್ರುವರಿ 22ರಿಂದ 10ನೇ ತರಗತಿ ಪರೀಕ್ಷೆ ಆರಂಭವಾಗಲಿದೆ. 12ನೇ ತರಗತಿ ಪರೀಕ್ಷೆ ಫೆಬ್ರುವರಿ 4ರಿಂದ ಆರಂಭವಾಗಲಿದೆ. ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ನಂತರ ತಿಳಿಸುವುದಾಗಿ ಹೇಳಿದೆ.

ADVERTISEMENT

ವೇಳಾಪಟ್ಟಿಗಾಗಿ ಮಂಡಳಿಯ ವೆಬ್‌ಸೈಟ್‌ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.