ADVERTISEMENT

ನನ್ನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಿ ಬಂದರೆ ಹೂತುಹಾಕುವೆ: ಸಂಜಯ್ ಗಾಯಕವಾಡ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:11 IST
Last Updated 18 ಸೆಪ್ಟೆಂಬರ್ 2024, 14:11 IST
<div class="paragraphs"><p>ರಾಹುಲ್ ಗಾಂಧಿ ಮತ್ತು&nbsp;ಸಂಜಯ್‌ ಗಾಯಕ್ವಾಡ್‌</p></div>

ರಾಹುಲ್ ಗಾಂಧಿ ಮತ್ತು ಸಂಜಯ್‌ ಗಾಯಕ್ವಾಡ್‌

   

ಮುಂಬೈ: ಪ್ರಚೋದನಕಾರಿ ಹೇಳಿಕೆಯೊಂದನ್ನು ಮತ್ತೊಮ್ಮೆ ನೀಡಿರುವ ಶಿವಸೇನಾ ಶಾಸಕ ಸಂಜಯ್ ಗಾಯಕವಾಡ್ ಅವರು, ‘ನನ್ನ ಕಾರ್ಯಕ್ರಮಕ್ಕೆ ಬರುವ ಯಾವುದೇ ಕಾಂಗ್ರೆಸ್ ನಾಯಿಯನ್ನು ಹೂತುಹಾಕುತ್ತೇನೆ’ ಎಂದು ಬೆದರಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಗೆಯನ್ನು ಕತ್ತರಿಸಿಹಾಕುವವರಿಗೆ ಬಹುಮಾನ ನೀಡುವುದಾಗಿ ಗಾಯಕವಾಡ್ ಅವರು ಸೋಮವಾರ ಹೇಳಿದ್ದು ವಿವಾದ ಸೃಷ್ಟಿಸಿತ್ತು. 

ADVERTISEMENT

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಗಾಯಕವಾಡ್ ಅವರು, ತಮ್ಮ ಜಿಲ್ಲೆಯ ಮಹಿಳೆಯರಿಗಾಗಿನ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿರುವುದು ವಿಡಿಯೊದಲ್ಲಿ ಕೇಳುತ್ತದೆ.

‘ನನ್ನ ಕಾರ್ಯಕ್ರಮಕ್ಕೆ ಬರಲು ಯಾವುದೇ ಕಾಂಗ್ರೆಸ್ ನಾಯಿ ಪ್ರಯತ್ನಿಸಿದರೆ, ನಾನು ಅವರನ್ನು ಆಗಲೇ, ಅಲ್ಲಿಯೇ ಹೂತುಹಾಕುತ್ತೇನೆ’ ಎಂದು ಗಾಯಕವಾಡ್ ಅವರು ಹೇಳಿರುವುದು ವಿಡಿಯೊದಲ್ಲಿ ಇದೆ.

ಮೀಸಲಾತಿ ವ್ಯವಸ್ಥೆಯ ಬಗ್ಗೆ ರಾಹುಲ್ ಅವರು ಆಡಿದ ಮಾತುಗಳಿಗೆ ಪ್ರತಿಕ್ರಿಯೆಯಾಗಿ ಗಾಯಕವಾಡ್ ಅವರು, ‘ರಾಹುಲ್ ಅವರ ನಾಲಗೆ ಕತ್ತರಿಸುವವರಿಗೆ ₹11 ಲಕ್ಷ ಬಹುಮಾನ ನೀಡುತ್ತೇನೆ’ ಎಂದು ಘೋಷಿಸಿದ್ದರು.

‘ನಾನು ಹೇಳಿಕೆ ನೀಡಿದ್ದೇನೆ. ನಾನು ಕ್ಷಮೆ ಕೇಳಿಲ್ಲ ಎಂದಾದರೆ, ಸಿಎಂ ಏಕೆ ಕ್ಷಮೆ ಕೇಳಬೇಕು? ದೇಶದ 140 ಕೋಟಿ ಜನರ ಪೈಕಿ ಶೇಕಡ 50ರಷ್ಟು ಮಂದಿ ಮೀಸಲಾತಿ ಪಡೆಯುತ್ತಿದ್ದಾರೆ. ಮೀಸಲಾತಿಯನ್ನು ತೆಗೆಯುವ ಬಗ್ಗೆ ಮಾತನಾಡಿದ ವ್ಯಕ್ತಿಯ ಕುರಿತು ನಾನು ಆಡಿದ ಮಾತಿನ ವಿಚಾರದಲ್ಲಿ ದೃಢವಾಗಿದ್ದೇನೆ’ ಎಂದು ಗಾಯಕವಾಡ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.