ADVERTISEMENT

ದೆಹಲಿ ಚಲೋ ಸದ್ಯಕ್ಕೆ ಸ್ಥಗಿತ,ಬೇಡಿಕೆ ಈಡೇರದಿದ್ದರೆ ಫೆ.21ರಿಂದ ಪುನರಾರಂಭ: ರೈತರು

ಪಿಟಿಐ
Published 19 ಫೆಬ್ರುವರಿ 2024, 3:05 IST
Last Updated 19 ಫೆಬ್ರುವರಿ 2024, 3:05 IST
<div class="paragraphs"><p>ರೈತರ ಪ್ರತಿಭಟನೆ</p></div>

ರೈತರ ಪ್ರತಿಭಟನೆ

   

ಪಿಟಿಐ ಚಿತ್ರ

ಚಂಡೀಗಢ: ಕೇಂದ್ರ ನಾಯಕರೊಂದಿಗೆ 4 ನೇ ಸುತ್ತಿನ ಮಾತುಕತೆ ನಡೆಸಿದ ರೈತ ಮುಖಂಡರು, ‘ಇನ್ನೆರಡು ದಿನಗಳಲ್ಲಿ ಸರ್ಕಾರದ ಪ್ರಸ್ತಾವನೆ ಕುರಿತು ನಾವು ಚರ್ಚೆ ನಡೆಸುತ್ತೇವೆ. ಇತರ ಬೇಡಿಕೆಗಳ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿ. ತಾತ್ಕಾ‌ಲಿಕವಾಗಿ ಪ್ರತಿಭಟನೆ ಸ್ಥಗಿತಗೊಳಿಸಲಾಗಿದ್ದು, ಫಲಿತಾಂಶ ಬಾರದಿದ್ದಲ್ಲಿ ಫೆ.21ರಿಂದ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ. 

ADVERTISEMENT

ಮಾತುಕತೆ ವೇಳೆ, ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಪ್ರಸ್ತಾವನ್ನು ಕೇಂದ್ರ ಸಚಿವರ ತಂಡ ರೈತರ ಮುಂದೆ ಇಟ್ಟಿದೆ.

ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ದೆಹಲಿ ಗಡಿಗಳಲ್ಲಿ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.