ADVERTISEMENT

ತುರ್ತು ಪರಿಸ್ಥಿತಿ ಹೊರತುಪಡಿಸಿದರೆ ಸಂಸತ್ತು ಉತ್ತಮ ಕಾರ್ಯನಿರ್ವಹಿಸಿದೆ: ಧನಕರ್

ಪಿಟಿಐ
Published 27 ಜುಲೈ 2024, 12:33 IST
Last Updated 27 ಜುಲೈ 2024, 12:33 IST
ಜಗದೀಪ್ ಧನಕರ್
ಜಗದೀಪ್ ಧನಕರ್   

ನವದೆಹಲಿ: ತುರ್ತು ಪರಿಸ್ಥಿತಿ ಅವಧಿಯನ್ನು ಅತ್ಯಂತ 'ನೋವಿನ, ಕರಾಳ' ಸಮಯ ಎಂದಿರುವ ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರು, ಆ ಅವಧಿಯನ್ನು ಹೊರತುಪಡಿಸಿದರೆ, ಸಂಸತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ನೂತನ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, 'ತುರ್ತು ಪರಿಸ್ಥಿತಿ ಘೋಷಣೆಯು ನೋವಿನ, ಹೃದಯ ವಿದ್ರಾವಕ ಕರಾಳ ಅವಧಿ. ಆ ಸಂದರ್ಭದಲ್ಲಿ ಸಂವಿಧಾನವು ಕಾಗದಕ್ಕೆ ಸೀಮಿತವಾಗಿತ್ತು' ಎಂದು ಪ್ರತಿಪಾದಿಸಿದ್ದಾರೆ.

'ಹಲವು ನಾಯಕರನ್ನು ಜೈಲಿಗೆ ಅಟ್ಟಲಾಗಿತ್ತು. ಮೀಸಾ (ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆ) ಎಂಬುದು ಆಗ ಅತ್ಯಂತ ಕಠಿಣ ಪದವಾಗಿತ್ತು. ದೇಶದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಲಾಲು ಪ್ರಸಾದ್‌ ಅವರು, ತುರ್ತ ಪರಿಸ್ಥಿತಿಯ ದುಷ್ಕೃತ್ಯಗಳನ್ನು ಅನುಭವಿಸಿದ್ದರು. ಅದರ ಪರಿಣಾಮವಾಗಿ ತಮ್ಮ ಮಗಳಿಗೆ ಮೀಸಾ ಎಂದು ಹೆಸರಿಟ್ಟರು' ಎಂದು ಸ್ಮರಿಸಿದ್ದಾರೆ.

ADVERTISEMENT

'ತುರ್ತು ಪರಿಸ್ಥಿತಿಯ ಅವಧಿಯು ಭಾವನಾತ್ಮಕವಾಗಿತ್ತು. ಅದನ್ನು ಕಡೆಗಣಿಸಿದರೆ, ನಮ್ಮ ಸಂಸತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ' ಎಂದು ಧನಕರ್‌ ಒತ್ತಿಹೇಳಿದ್ದಾರೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಸಂಸತ್ತಿನ ಎಲ್ಲ ಸದಸ್ಯರ ಬಗ್ಗೆಯೂ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾಲು ಪುತ್ರಿ ಮೀಸಾ ಭಾರತಿ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಪ್ರಸ್ತುತ ಲೋಕಸಭೆ ಸಂಸದರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.