ನವದೆಹಲಿ: ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಯ ಮೇಲೆ ನಿಗಾ ಇಡುವ ಸ್ಮಾರ್ಟ್ ಮಾನಿಟರಿಂಗ್ ಸಿಸ್ಟಂ (ಎಸ್‌ಎಂಎಸ್) ಅನ್ನು ದೆಹಲಿಯ ಐಐಟಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಜಾಗತಿಕ ಮಟ್ಟದ ಪ್ರಮುಖ ಸುರಕ್ಷತಾ ಕಂಪನಿಗಳಲ್ಲಿ ಒಂದೆನಿಸಿರುವ ಕರಮ್ ಸೇಫ್ಟಿ ಪ್ರೈವೇಟ್ ಲಿಮಿಟೆಡ್ (ಕೆಎಸ್‌ಪಿಎಲ್) ಹಾಗೂ ದೆಹಲಿ ಐಐಟಿಯ ನಾವಿನ್ಯತೆ ಮತ್ತು ತಂತ್ರಜ್ಞಾನ ವರ್ಗಾವಣೆ ಪ್ರತಿಷ್ಠಾನ (ಎಫ್‌ಐಟಿಟಿ) ಈ ಸಂಬಂಧ ಒಪ್ಪಂದ ಮಾಡಿಕೊಂಡಿವೆ.
ಈ ಬಗ್ಗೆ ಮಾತನಾಡಿರುವ ದೆಹಲಿ ಐಐಟಿ ಪ್ರಾಧ್ಯಾಪಕ ಹುಸೇನ್ ಕಂಚಾವಾಲ, 'ಎತ್ತರ ಸ್ಥಳಗಳಿಂದ ಆಯ ತಪ್ಪಿ ಬೀಳುವುದು ಕೆಲಸ ಸ್ಥಳಗಳಲ್ಲಿ ಸಂಭವಿಸುವ ಗಂಭೀರ ಹಾಗೂ ಮಾರಣಾಂತಿಕ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಬಹುತೇಕ ಕೆಲಸಗಾರರು ಸುರಕ್ಷತಾ ಸಾಮಗ್ರಿಗಳನ್ನು ಧರಿಸಿರುತ್ತಾರೆ. ಆದರೆ, ಕೆಲಸ ಮುಗಿಸುವ ಆತುರದಲ್ಲಿ ಸರಿಯಾಗಿ ತೊಟ್ಟುಕೊಳ್ಳುವುದನ್ನು ಮರೆತಿರುತ್ತಾರೆ. ಇದರ ಮೇಲೆ ಎಸ್‌ಎಂಎಸ್ ನಿಗಾ ಇಡಲಿದೆ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.