ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗಾಗಿ ಭಾರತೀಯ ಮಸಾಲೆ ಪದಾರ್ಥಗಳನ್ನು ಬಳಸಿ ಔಷಧಿ ತಯಾರಿಸುವ ಕುರಿತು ಪೇಟೆಂಟ್ ಪಡೆದಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ- ಮದ್ರಾಸ್ (ಐಐಟಿ) ಈ ಕುರಿತ ಔಷಧಿಗಳನ್ನು 2028ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮಸಾಲೆ ಪದಾರ್ಥಗಳಿಂದ ಅಭಿವೃದ್ಧಿಪಡಿಸಿರುವ ನ್ಯಾನೊಮೆಡಿಸಿನ್‌ಗಳು ಶ್ವಾಸಕೋಶ, ಸ್ತನ, ದೊಡ್ಡ ಕರಳು, ಗರ್ಭಕಂಠ, ಬಾಯಿ ಮತ್ತು ಥೈರಾಯ್ಡ್ ಕೋಶಗಳ ವಿರುದ್ಧ ಕ್ಯಾನ್ಸರ್ ವಿರೋಧಿ ಚಟುವಟಿಕೆಗಳನ್ನು ತೋರಿಸಿವೆ. ಆದರೆ, ಸಾಮಾನ್ಯ ಜೀವಕೋಶಗಳಲ್ಲಿ ಅವು ಸುರಕ್ಷಿತವಾಗಿವೆ ಎಂದು ಅವರು ಹೇಳಿದ್ದಾರೆ.
ಸಂಶೋಧಕರು ಈ ಔಷಧಿಗಳ ಸುರಕ್ಷತೆ ಮತ್ತು ವೆಚ್ಚಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನ ಯಶಸ್ತಿಯಾಗಿ ಮುಕ್ತಾಯಗೊಂಡಿದೆ. 2027–28ರವೇಳೆಗೆ ಈ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವ ಗುರಿಯೊಂದಿಗೆ ‘ಕ್ಲಿನಿಕಲ್ ಪ್ರಯೋಗ’ಗಳನ್ನು ಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.