ADVERTISEMENT

ಅಸ್ಸಾಂ | ಐಸಿಸ್‌ಗೆ ಸೇರಲು ಹೊರಟಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

ಪಿಟಿಐ
Published 24 ಮಾರ್ಚ್ 2024, 5:05 IST
Last Updated 24 ಮಾರ್ಚ್ 2024, 5:05 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಐಸ್ಟೋಕ್)

ಗುವಾಹಟಿ: ಭಯೋತ್ಪಾದಕ ಸಂಘಟನೆ ಐಸಿಸ್‌‌ಗೆ ಸೇರಲು ಹೊರಟಿದ್ದ ಐಐಟಿ-ಗುವಾಹಟಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶನಿವಾರ ಸಂಜೆ ಗುವಾಹಟಿ ಸಮೀಪದ ಹಜೊ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಯಿತು.

ಐಐಟಿ ನಾಲ್ಕನೇ ವರ್ಷದ ವಿದ್ಯಾರ್ಥಿ, ದೆಹಲಿಯ ಓಖ್ಲಾ ಮೂಲದವರು ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶ ಗಡಿ ದಾಟಿ ಬಂದ ಐಸಿಸ್ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ ಮತ್ತು ಆತನ ಸಹಚ ಅನುರಾಗ್ ಸಿಂಗ್ ಅಲಿಯಾಸ್ ರೇಹಾನ್‌ನ್ನು ಅಸ್ಸಾಂನ ಭುಬ್ರಿ ಜಿಲ್ಲೆಯಲ್ಲಿ ಬಂಧಿಸಿದ ನಾಲ್ಕು ದಿನಗಳ ನಂತರದ ಈ ಘಟನೆ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಟಿಎಫ್) ಕಲ್ಯಾಣ್ ಕುಮಾರ್ ಪಾಠಕ್, 'ವಿದ್ಯಾರ್ಥಿ ಕಳುಹಿಸಿದ ಇ-ಮೇಲ್‌ನಲ್ಲಿ ತಾನು ಐಸಿಸ್‌ಗೆ ಸೇರುವ ಪ್ರತಿಜ್ಞೆ ಕೈಗೊಂಡಿದ್ದ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿ ನಾಪತ್ತೆಯಾಗಿರುವುದನ್ನು ಐಐಟಿ-ಗುವಾಹಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮೊಬೈಲ್ ಕೂಡ ಸ್ವಿಚ್-ಆಫ್ ಆಗಿತ್ತು' ಎಂದು ಹೇಳಿದ್ದಾರೆ.

'ಗುವಾಹಟಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಹಜೊ ಪ್ರದೇಶದಲ್ಲಿ ಸ್ಥಳೀಯರ ನೆರವಿನಿಂದ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಯಿತು. ಇಮೇಲ್‌ನ ಹಿಂದಿನ ಉದ್ದೇಶವನ್ನು ಪರಿಶೀಲಿಸಲಾಗುತ್ತಿದೆ. ವಿದ್ಯಾರ್ಥಿಯ ಹಾಸ್ಟೆಲ್ ಕೊಠಡಿಯಿಂದ ಐಸಿಸ್‌ಗೆ ಹೋಲುವ ಕಪ್ಪು ಬಾವುಟ ಪತ್ತೆಯಾಗಿದೆ' ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.