ADVERTISEMENT

ಉತ್ತರ ಪ್ರದೇಶದಲ್ಲಿ ಪಾತಕಿಗಳನ್ನು ಹತ್ತಿಕ್ಕಲು ಅಕ್ರಮ ಆಸ್ತಿ ಮುಟ್ಟುಗೋಲು ಅಭಿಯಾನ

ಪಿಟಿಐ
Published 6 ಆಗಸ್ಟ್ 2021, 8:48 IST
Last Updated 6 ಆಗಸ್ಟ್ 2021, 8:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ‌: ದರೋಡೆಕೋರರು ಮತ್ತು ಪಾತಕಿಗಳ ಹೆಡೆಮುರಿಕಟ್ಟಿ ಅವರ ಚಟುವಟಿಕೆಗಳನ್ನು ಹತ್ತಿಕ್ಕುವ ಸಲುವಾಗಿ ಉತ್ತರ ಪ್ರದೇಶದ ಪೊಲೀಸರು, ರಾಜ್ಯದಲ್ಲಿ ದರೋಡೆಕೋರರು ಹೊಂದಿದ್ದ ₹1,800 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಏಪ್ರಿಲ್ 2017ರಿಂದ ಜುಲೈ 2021ರವರೆಗೆ ನಡೆದಿರುವ ಈ ವಿಶೇಷ ಅಭಿಯಾನದಲ್ಲಿ ‘ಗ್ಯಾಂಗ್‌ಸ್ಟರ್‌ ಆಕ್ಟ್‌’ನಡಿ 13,801 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 43,294 ಆರೋಪಿಗಳನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿಯಲ್ಲಿ 630 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಪ್ರಶಾಂತ್ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಪಾತಕಿಗಳು ಅಕ್ರಮವಾಗಿ ಮಾಡಿಕೊಂಡಿದ್ದ ₹1,848 ಕೋಟಿ ಮೌಲ್ಯದ ಆಸ್ತಿಗಳನ್ನುಈ ಅಭಿಯಾನದ ಮೂಲಕ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಕೆಲವು ಕಡೆ ಅಕ್ರಮ ಆಸ್ತಿಯನ್ನು ನಾಶಪಡಿಸಿದ್ದೇವೆ. ಈ ಮೂಲಕ ಅವರ ಚುಟವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದೇವೆ. ರೌಡಿಗಳನ್ನು ಮಟ್ಟ ಹಾಕುವಂತಹ ಇಂಥ ಪ್ರಯತ್ನ ಇಲ್ಲಿವರೆಗೂ ನಡೆದಿಲ್ಲ‘ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.