ADVERTISEMENT

ಗುಜರಾತ್‌ನಲ್ಲಿ ಕ್ರಿಮಿನಲ್‌ಗಳ ಒಡೆತನದ ಅಕ್ರಮ ಕಟ್ಟಡ ಬುಲ್ಡೋಜರ್ ಬಳಸಿ ನೆಲಸಮ

ಪಿಟಿಐ
Published 22 ಏಪ್ರಿಲ್ 2022, 11:50 IST
Last Updated 22 ಏಪ್ರಿಲ್ 2022, 11:50 IST
   

ಸೂರತ್: ಗುಜರಾತ್‌ನ ಸೂರತ್‌ನಲ್ಲಿ ಶುಕ್ರವಾರ ಕ್ರಿಮಿನಲ್‌ಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿದೆ.

ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಕ್ರಿಮಿನಲ್ ವ್ಯಕ್ತಿಗೆ ಸೇರಿದ್ದ ಕಟ್ಟಡವನ್ನು ನೆಲಸಮ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರತ್‌ನ ಶೀತಲ್ ಸಿನಿಮಾ ಕಟ್ಟಡದ ಸಮೀಪವಿದ್ದ ಎರಡು ಅಂತಸ್ತಿನ ಕಟ್ಟಡವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಉರುಳಿಸಲಾಯಿತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಎಲ್. ಚೌಧರಿ ಹೇಳಿದ್ದಾರೆ.

ADVERTISEMENT

ಆರಿಫ್ ಮತ್ತು ಆತನ ಸಹೋದರ ಸಜ್ಜು ಎಂಬವರಿಗೆ ಸೇರಿದ್ದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆರಿಫ್ ಮತ್ತು ಸಜ್ಜು ಇಬ್ಬರೂ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಗಳಾಗಿದ್ದು, ಸಜ್ಜು ಪೊಲೀಸ್ ಕಸ್ಟಡಿಯಲ್ಲಿದ್ದರೆ, ಆರಿಫ್‌ನನ್ನು ಬಂಧಿಸಿ ಕರೆದೊಯ್ಯುವಾಗ ಗೆಳೆಯರ ಸಹಾಯದಿಂದ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.