ADVERTISEMENT

ಅಕ್ರಮ ವಲಸಿಗರೇ ಮಣಿಪುರಕ್ಕೆ ದೊಡ್ಡ ಸಮಸ್ಯೆ: ಮುಖ್ಯಮಂತ್ರಿ ಎನ್‌. ಬಿರೇನ್‌ಸಿಂಗ್

ಪಿಟಿಐ
Published 6 ಆಗಸ್ಟ್ 2024, 15:22 IST
Last Updated 6 ಆಗಸ್ಟ್ 2024, 15:22 IST
<div class="paragraphs"><p>ಎನ್‌. ಬಿರೇನ್‌ ಸಿಂಗ್‌</p></div>

ಎನ್‌. ಬಿರೇನ್‌ ಸಿಂಗ್‌

   

–ಪಿಟಿಐ ಚಿತ್ರ

ಇಂಫಾಲ್‌: ‘ಅಕ್ರಮ ವಲಸಿಗರೇ ಮಣಿಪುರದ ಮೂಲ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದ್ದು, 1961ರ ನಂತರ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿರುವವರನ್ನು ಕೇಂದ್ರ ಸರ್ಕಾರದ ನೆರವಿನಿಂದ ಹೊರಗೆ ಹಾಕಲಾಗುವುದು’ ಎಂದು ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ಸಿಂಗ್ ತಿಳಿಸಿದರು.

ADVERTISEMENT

ವಿಧಾನಸಭೆಯಲ್ಲಿ ನಾಗಾ ಪೀಪಲ್ಸ್‌ ಫ್ರಂಟ್‌ನ ಶಾಸಕ ಲೆಯಿಶಿಯೊ ಕೈಶಿಂಗ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದ ಪರಿಸ್ಥಿತಿ ಆತಂಕಕಾರಿಯಾಗಿದ್ದು, ಅಕ್ರಮ ವಲಸಿಗರನ್ನು ಹೊರಹಾಕುವ ವಿಚಾರದಲ್ಲಿ ಏಕತೆ ಪ್ರದರ್ಶಿಸುವ ಅಗತ್ಯವಿದೆ’ ಎಂದು ಈ ವೇಳೆ ಪ್ರತಿಪಾದಿಸಿದರು. 

‘ನಿಜಕ್ಕೂ ಇದೊಂದು ಆತಂಕಕಾರಿ ಸ್ಥಿತಿ. ಅಕ್ರಮ ವಲಸಿಗರಿಂದ ಭೌಗೋಳಿಕ ಬದಲಾವಣೆಗೆ ಕಾರಣವಾಗಿದೆ. ಕೆಲವರು ಇದನ್ನು ನಂಬದೇ ಇರಬಹುದು. ಈ ವಿಚಾರದಲ್ಲಿ ಏಕತೆ ಪ್ರದರ್ಶಿಸದಿದ್ದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ರಾಜ್ಯವು ನೆರೆಯ ರಾಷ್ಟ್ರ ಮ್ಯಾನ್ಮಾರ್‌ನೊಂದಿಗೆ ಕಾವಲುರಹಿತ 398 ಕಿ.ಮೀ. ಅಂತರರಾಷ್ಟ್ರೀಯ ಗಡಿ ಹಂಚಿಕೊಂಡಿದ್ದು, ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದು ಕೂಡ ಸವಾಲಾಗಿದೆ’ ಎಂದರು.

ಅಕ್ರಮ ವಲಸಿಗರೇ ಹೊಸ ಗ್ರಾಮಗಳನ್ನು ನಿರ್ಮಿಸಿಕೊಂಡಿದ್ದು, ಮ್ಯಾನ್ಮಾರ್ ಮೂಲದ ‍ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌ನ ಜೊತೆಗೆ ಸ್ಥಳೀಯರ ಸಂಘರ್ಷದಿಂದ ಇಲ್ಲಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಅಕ್ರಮ ವಲಸಿಗರಿಗೆ ಆಶ್ರಯ ನೀಡಿದರೆ, ಅಂತಹವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು’ ಎಂದು ಬಿರೇನ್‌ ಸಿಂಗ್‌ ಎಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.