ADVERTISEMENT

ಮಧ್ಯಪ್ರದೇಶ: ಟ್ರ್ಯಾಕ್ಟರ್‌ ಟ್ರಾಲಿ ಹತ್ತಿಸಿ ಪೊಲೀಸ್‌ ಹತ್ಯೆಗೈದವರ ಮನೆ ನೆಲಸಮ

​ಪ್ರಜಾವಾಣಿ ವಾರ್ತೆ
Published 6 ಮೇ 2024, 13:50 IST
Last Updated 6 ಮೇ 2024, 13:50 IST
   

ಶಾಹಡೋಲ್‌: ಮಧ್ಯಪ್ರದೇಶದ ಶಾಹಡೋಲ್ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಹತ್ತಿಸಿ ಪೊಲೀಸ್‌ ಅಧಿಕಾರಿಯನ್ನು ಕೊಂದ ಪ್ರಕರಣದ ಇಬ್ಬರು ಆರೋಪಿಗಳ ಮನೆಗಳನ್ನು ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ಟ್ರ್ಯಾಕ್ಟರ್‌ ಮಾಲೀಕ ಸುರೇಂದ್ರ ಸಿಂಗ್‌ ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ ಅವರನ್ನು ಬಂಧಿಸಲಾಗಿದೆ. ಘಟನೆ ಸಂದರ್ಭದಲ್ಲಿ ಸುರೇಂದ್ರ ಸಿಂಗ್‌ ಪುತ್ರ ಆಶುತೋಷ್‌ ಸಿಂಗ್ ಟ್ರ್ಯಾಕ್ಟರ್‌ ಮೇಲಿದ್ದರು. ಚಾಲಕ ರಾಜ್‌ ರಾವತ್‌ನನ್ನು ಪೊಲೀಸರು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕುಮಾರ್‌ ಪ್ರತೀಕ್‌ ತಿಳಿಸಿದರು.

ಜಿಲ್ಲಾಧಿಕಾರಿ ತರುಣ್‌ ಭಟ್ನಾಗರ್‌ ಆದೇಶದ ಮೇರೆಗೆ ಭಾನುವಾರ ಚಾಲಕನ ಸುಮಾರು ₹4 ಲಕ್ಷ ಮೌಲ್ಯದ ಮನೆಯನ್ನು ನೆಲಸಮ ಮಾಡಲಾಗಿದೆ. ಟ್ರ್ಯಾಕ್ಟರ್‌ ಮಾಲೀಕ ಸಿಂಗ್‌ ಅವರ ಸುಮಾರು ₹10 ಲಕ್ಷ ಮತ್ತು ₹4 ಲಕ್ಷ ಮೌಲ್ಯದ ಎರಡು ಮನೆಗಳನ್ನೂ ನೆಲಸಮಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಮೃತಪಟ್ಟಿರುವ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮಹೇಂದ್ರ ಬಾಗ್ರಿ ಅವರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವ ಪ್ರಸ್ತಾವವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.