ADVERTISEMENT

ಪಂಜಾಬ್ ಚುನಾವಣೆ: ಸಿಎಂ ಚನ್ನಿ ಅಳಿಯನ ಮನೆ ಮೇಲೆ ದಾಳಿ ಮಾಡಿದ ಇ.ಡಿ

ಅಕ್ರಮ ಮರಳು ಮಾಫಿಯಾದಿಂದ ಚುನಾವಣೆಗೆ

ಪಿಟಿಐ
Published 18 ಜನವರಿ 2022, 8:20 IST
Last Updated 18 ಜನವರಿ 2022, 8:20 IST
ಪಂಜಾಬ್ ಸಿಎಂ ಚೆನ್ನಿ
ಪಂಜಾಬ್ ಸಿಎಂ ಚೆನ್ನಿ   

ನವದೆಹಲಿ: ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಮರಳು ಮಾಫಿಯಾ ಅಡ್ಡೆಗಳ ಮೇಲೆಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ದಾಳಿ ಮಾಡಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಹಣಅಕ್ರಮ ವರ್ಗಾವಣೆಯ ದೂರುಗಳು ಬಂದಿದ್ದರಿಂದ ಇ.ಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಪ್ರಮುಖವಾಗಿ ಇ.ಡಿ ಅಧಿಕಾರಿಗಳು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಳಿಯ ಭೂಪೆಂದ್ರ ಸಿಂಗ್ ಹನಿ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಣ ಅಕ್ರಮ ವರ್ಗಾವಣೆ ಹಾಗೂ ಕಾನೂನು ಬಾಹಿರಮರಳು ದಂಧೆಯಲ್ಲಿ ಅವರ ಹೆಸರು ಕೇಳಿ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಂಜಾಬ್‌ನ 10 ರಿಂದ 12 ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದ್ದು, ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ವಶಕ್ಕೆ ತೆಗೆದುಕೊಂಡವರಲ್ಲಿ ಬಹುತೇಕರು ರಾಜಕೀಯ ನಾಯಕರ ಜೊತೆ ನಂಟು ಹೊಂದಿದ್ದಾರೆ ಎನ್ನಲಾಗಿದೆ.

ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ಫೆಬ್ರುವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.