ADVERTISEMENT

ರಾಜಸ್ಥಾನ | ವನ್ಯಜೀವಿಗಳ ಅಂಗಾಂಗ ಅಕ್ರಮ ಮಾರಾಟ: ನಾಲ್ವರ ಬಂಧನ

ಪಿಟಿಐ
Published 12 ಸೆಪ್ಟೆಂಬರ್ 2024, 8:02 IST
Last Updated 12 ಸೆಪ್ಟೆಂಬರ್ 2024, 8:02 IST
<div class="paragraphs"><p>ಬಂಧನ ( ಸಾಂಕೇತಿಕ ಚಿತ್ರ)</p></div>

ಬಂಧನ ( ಸಾಂಕೇತಿಕ ಚಿತ್ರ)

   

ಕೋಟ: ವನ್ಯಜೀವಿಗಳ ಅಂಗಾಂಗಗಳ ಅಕ್ರಮ ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ರಾಜಸ್ಥಾನದ ಕೋಟದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

‘ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗ (ಡಬ್ಲ್ಯುಸಿಸಿಬಿ) ನೀಡಿದ ಮಾಹಿತಿ ಮೇರೆಗೆ ಪ್ರಾದೇಶಿಕ ಅರಣ್ಯ ಕಚೇರಿ ತಂಡಗಳು ಗುಮನಪುರ ಮತ್ತು ಘಂಟಾಘರ್ ನಗರಗಳ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿವೆ. ಈ ವೇಳೆ ವನ್ಯಜೀವಿಗಳ ಅಂಗಾಂಗಗಳಾದ ಆಮೆಯ ದೇಹದ ಭಾಗಗಳು, ಜಿಂಕೆ ಕೊಂಬುಗಳು, ಹಲ್ಲಿಯ ಜನನಾಂಗ ಮತ್ತು ನರಿ ಚರ್ಮಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಧಾರ್ಮಿಕ ಆಚರಣೆಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಇಟ್ಟುಕೊಂಡು ವನ್ಯಜೀವಿಗಳ ಅಂಗಾಂಗಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

‘ಅಂಗಡಿಗಳಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಡಬ್ಲ್ಯುಸಿಸಿಬಿ ಅಧಿಕಾರಿಗಳು ನಿಗಾ ವಹಿಸಿದ್ದರು. ಈ ಕುರಿತು ಬುಧವಾರ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು’ ಎಂದು ಕೋಟದ ವನ್ಯಜೀವಿ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ (ಎಸಿಎಫ್‌) ಅನುರಾಗ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಾಪಾರಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.