ADVERTISEMENT

ಆಜಂಖಾನ್‌ ಕುಟುಂಬ ಒಡೆತನದ ‘ಅಕ್ರಮ’ ರೆಸಾರ್ಟ್ ನೆಲಸಮ

ಪಿಟಿಐ
Published 9 ಜುಲೈ 2024, 19:43 IST
Last Updated 9 ಜುಲೈ 2024, 19:43 IST
-
-   

ರಾಂಪುರ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಕುಟುಂಬದ ಒಡೆತನದಲ್ಲಿರುವ ‘ಅಕ್ರಮ’ ರೆಸಾರ್ಟ್‌ಅನ್ನು ರಾಂಪುರ ಜಿಲ್ಲಾಡಳಿತ ಮಂಗಳವಾರ ನೆಲಸಮಗೊಳಿಸಿದೆ.

ಜಿಲ್ಲೆಯ ಪಸಿಯಾಪುರದಲ್ಲಿ ‘ಅಕ್ರಮ’ವಾಗಿ ನಿರ್ಮಿಸಲಾಗಿದ್ದ ‘ಹಮ್‌ಸಫರ್ ರೆಸಾರ್ಟ್‌’ ಅನ್ನು ಉಪವಿಭಾಗಾಧಿಕಾರಿ ಮೋನಿಕಾ ಸಿಂಗ್‌ ನೇತೃತ್ವದ ಅಧಿಕಾರಿಗಳ ತಂಡ ನೆಲಸಮಗೊಳಿಸಿದೆ. ಈ ವೇಳೆ, ಭಾರಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಸರ್ಕಾರಿ ಜಮೀನಿನಲ್ಲಿ ರಸಗೊಬ್ಬರ ಘಟಕವಿದ್ದು, ಉಳಿದ ಜಾಗದಲ್ಲಿ ‘ಕಾನೂನುಬಾಹಿರ’ವಾಗಿ ರೆಸಾರ್ಟ್‌ ನಿರ್ಮಿಸಲಾಗಿತ್ತು. ರೆಸಾರ್ಟ್‌ ನೆಲಸಮಗೊಳಿಸಿ, 0.038 ಹೆಕ್ಟೇರ್‌ ಪ್ರದೇಶವನ್ನು ಮುಕ್ತಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೋಗಿಂದರ್‌ ಸಿಂಗ್ ಹೇಳಿದ್ದಾರೆ.

ADVERTISEMENT

ಈ ‘ಅಕ್ರಮ’ ರೆಸಾರ್ಟ್‌ ಕುರಿತು ರಾಂಪುರ ಕ್ಷೇತ್ರದ ಬಿಜೆಪಿ ಶಾಸಕ ಆಕಾಸ್‌ ಸಕ್ಸೇನಾ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.