ADVERTISEMENT

ವಿರೋಧಿಗಳ ಹೋಟೆಲ್‌ನಲ್ಲಿ ಹಣ ಹಂಚುವಷ್ಟು ಮೂರ್ಖನಲ್ಲ: ವಿನೋದ್ ತಾವ್ಡೆ

ಪಿಟಿಐ
Published 20 ನವೆಂಬರ್ 2024, 14:38 IST
Last Updated 20 ನವೆಂಬರ್ 2024, 14:38 IST
<div class="paragraphs"><p>ವಿನೋದ್ ತಾವ್ಡೆ</p></div>

ವಿನೋದ್ ತಾವ್ಡೆ

   

ಮುಂಬೈ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಮಾಡಿದ್ದ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ‘ರಾಜಕೀಯ ವಿರೋಧಿಗಳ ಮಾಲೀಕತ್ವದ ಹೋಟೆಲ್‌ನಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗುವಷ್ಟ ಮೂರ್ಖ ನಾನಲ್ಲ’ ಎಂದು ಪ್ರತಿಕ್ರಿಯಿಸಿದರು.

ಮತದಾರರನ್ನು ಓಲೈಸಲು ತಾವ್ಡೆ ಅವರು ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ವಿರಾರ್‌ನ ಹೋಟೆಲ್‌ನಲ್ಲಿ ₹5 ಕೋಟಿ ಹಂಚಿದ್ದಾರೆ ಎಂದು ಬಹುಜನ ವಿಕಾಸ್‌ ಆಘಾಡಿ (ಬಿವಿಎ) ನಾಯಕ ಹಿತೇಂದ್ರ ಠಾಕೂರ್‌ ಮಂಗಳವಾರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಚುನಾವಣಾ ಅಧಿಕಾರಿಯೊಬ್ಬರು ಹೋಟೆಲ್‌ ಕೊಠಡಿಗಳಿಂದ ₹9.93 ಲಕ್ಷ ನಗದು ವಶಪಡಿಸಿಕೊಂಡಿದ್ದರು.

ADVERTISEMENT

ಈ ಆರೋಪಗಳನ್ನು ಅಲ್ಲಗಳೆದಿರುವ ತಾವ್ಡೆ, ‘ಚುನಾವಣಾ ಪ್ರಕ್ರಿಯೆಗಳ ಕುರಿತು ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ‌ನೀಡುತ್ತಿದ್ದೆನಷ್ಟೆ’ ಎಂದು ತಿಳಿಸಿದರು.

‘ಪಾಲ್ಘರ್‌ನ ವಿರಾರ್‌ನಲ್ಲಿ ಠಾಕೂರರ ಒಡೆತನದ ಹೋಟೆಲ್‌ನಲ್ಲಿ ಹಣ ಹಂಚುವಷ್ಟು ಮೂರ್ಖ ನಾನಲ್ಲ. 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಚುನಾವಣಾ ನಿಯಮಗಳ ಬಗ್ಗೆ ಅರಿವಿದೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.