ಜೋರ್ಹತ್: ಭಾರತೀಯ ವಾಯುಪಡೆಯAN-32 ವಿಮಾನ ಪತನಗೊಂಡಿರುವ ಸ್ಥಳದ ಚಿತ್ರಗಳುಮಂಗಳವಾರ ರಾತ್ರಿ ಲಭ್ಯವಾಗಿವೆ.
ಅರುಣಾಚಲ ಪ್ರದೇಶದ ಲಿಪೋ ಎಂಬಲ್ಲಿಂದ 16 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದೆ ಎಂಬ ಮಾಹಿತಿಪತ್ತೆ ಕಾರ್ಯದಲ್ಲಿ ತೊಡಗಿದ್ದ ತಂಡಕ್ಕೆ ಮಂಗಳವಾರ ತಿಳಿಯಿತು. ಈ ಸ್ಥಳದಲ್ಲಿ ವಾಯುಪಡೆಯ AM–17v5, ಚೀತಾ ಹೆಲಿಕಾಪ್ಟರ್‌ಗಳ ಮೂಲಕ ವೈಮಾನಿಕ ಪರಿಶೀಲನೆ ನಡೆಸಲಾಯಿತು.ಆಗ ಒಂದು ಪ್ರದೇಶದಲ್ಲಿ ಮರಗಳು ಧ್ವಂಸಗೊಂಡಿರುವ ದೃಶ್ಯ ಕಾಣಿಸಿದೆ. ಆ ಸ್ಥಳದಲ್ಲಿ ಕೂಲಂಕಷವಾಗಿ ಪರಿಶೀಲಿಸಿದಾಗ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎನ್ನಲಾಗಿದೆ.
ಆದರೆ, ಹೆಲಿಕಾಪ್ಟರ್‌ಗಳು ಆ ಸ್ಥಳದಲ್ಲಿ ಭೂಸ್ಪರ್ಶ ಮಾಡಲು ಸಾಧ್ಯವಾಗಿಲ್ಲ. ಗುಡ್ಡಗಾಡು ಪ್ರದೇಶವಾಗಿರುವ ಈ ಸ್ಥಳಕ್ಕೆ ತೆರಳುವುದು ತ್ರಾಸದಾಯಕವೆನಿಸಿದೆ. ಅಲ್ಲದೆ, ಅವಶೇಷಗಳನ್ನು ಮೇಲಕೆತ್ತಬೇಕಿದ್ದರೆ ಭಾರಿ ಕಷ್ಟಪಡಬೇಕಾದ ಪರಿಸ್ಥಿತಿ ಇದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಇದರ ಹೊರತಾಗಿಯೂ ಮಂಗಳವಾರಅಧಿಕೃತವಾಗಿ ಮಾತನಾಡಿರುವ ವಾಯುಪಡೆಯು, ಪತನಗೊಂಡ ಸ್ಥಳಕ್ಕೆ ಹತ್ತಿರ ಎನಿಸುವ ಲ್ಯಾಂಡಿಂಗ್ ಜಾಗವನ್ನು ನಾವು ಗುರುತಿಸಿದ್ದೇವೆ. ಬುಧವಾರ ಬೆಳಗ್ಗಿನಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ಸೇನಾ ಸಿಬ್ಬಂದಿ ಸ್ಥಳಕ್ಕೆ ತೆರಳುವ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಿದೆ.
ಕಳೆದ ಸೋಮವಾರ 13ಮಂದಿ ಸೇನಾ ಸಿಬ್ಬಂದಿಯನ್ನು ಹೊತ್ತAn-32 ವಿಮಾನವು ಅರುಣಾಚಲ ಪ್ರದೇಶದ ಮೆನ್‌ಚುಕಾಗೆ ತೆರಳಲು ಅಸ್ಸಾಂನ ಜೊರ್ಹತ್ ವಾಯುನೆಲೆಯಿಂದ ಮಧ್ಯಾಹ್ನ 12.27ಕ್ಕೆ ಟೇಕಾಫ್ ಆಗಿತ್ತು. ಆದರೆ, 1 ಗಂಟೆ ಹೊತ್ತಿಗೆ ಅದು ನಿಯಂತ್ರಣ ಕಳೆದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ವಾಯುಪಡೆ, ಭೂಸೇನೆ, ಸ್ಥಳೀಯ ಪೊಲೀಸರು, ರಾಜ್ಯ ಸರ್ಕಾರ, ಅರೆ ಸೇನಾ ಪಡೆ, ಸ್ಥಳೀಯರು ವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.