ADVERTISEMENT

ಯುಸಿಸಿ ಜಾರಿ ಸುಲಭವಲ್ಲ ಎಂದ ಗುಲಾಂ ನಬಿ ಆಜಾದ್

ಪಿಟಿಐ
Published 8 ಜುಲೈ 2023, 13:40 IST
Last Updated 8 ಜುಲೈ 2023, 13:40 IST
ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌   

ಶ್ರೀನಗರ: ‘ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸುವುದು 370ನೇ ವಿಧಿಯನ್ನು ರದ್ದುಪಡಿಸಿದಷ್ಟು ಸುಲಭವಲ್ಲ‘ ಎಂದು ಪ್ರಜಾಸತ್ತಾತ್ಮಕ ಪ್ರಗತಿಪರ ಆಜಾದ್‌ ಪಕ್ಷದ ಗುಲಾಂ ನಬಿ ಆಜಾದ್‌ ಶನಿವಾರ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುಸಿಸಿ ಎಲ್ಲ ಧರ್ಮಗಳ ಮೇಲೂ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

‘ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮುಸ್ಲಿಮರಿಗೆ ಮಾತ್ರವಲ್ಲ, ಕ್ರೈಸ್ತರು, ಸಿಖ್ಖರು, ಬುಡಕಟ್ಟು ಜನರು, ಜೈನರು, ಪಾರ್ಸಿ ಸಮುದಾಯದವರಿಗೂ ತೊಂದರೆಯಾಗುತ್ತದೆ. ಒಂದೇ ಬಾರಿಗೆ ಇಷ್ಟೊಂದು ಸಮುದಾಯಗಳಿಗೆ ಕಿರುಕುಳ ಕೊಡುವುದರಿಂದ ಯಾವುದೇ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಈ ಸಂಹಿತೆಯನ್ನು ಜಾರಿ ಮಾಡಬಾರದು ಎಂಬುದು ಸರ್ಕಾರಕ್ಕೆ ನನ್ನ ಸಲಹೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.