ಶಾಮ್ಲಿ (ಉತ್ತರ ಪ್ರದೇಶ): 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಕರ್ತಾರ್ ಸಿಂಗ್ ಭದನಾ ಅವರನ್ನು ತಪ್ಪಿತಸ್ಥರೆಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣವನ್ನು ಪರಿಶೀಲಿಸಿದ ಸಿವಿಲ್ ನ್ಯಾಯಾಧೀಶ ವಿಜಯ್ ಕುಮಾರ್ ವರ್ಮಾ ಅವರು ಕರ್ತಾರ್ ಸಿಂಗ್ ಭದನಾ ಅವರಿಗೆ ಒಂದು ತಿಂಗಳ ಜೈಲು ಶಿಕ್ಷೆ ಮತ್ತು ₹100 ದಂಡ ವಿಧಿಸಿದ್ದಾರೆ.
ಶಾಮ್ಲಿ ಜಿಲ್ಲೆಯ ಬುಟ್ರಡಾ ಗ್ರಾಮದಲ್ಲಿ 2014ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, 100 ರಿಂದ 150 ಬೆಂಬಲಿಗರೊಂದಿಗೆ ಅನುಮತಿಯಿಲ್ಲದೆ ಭದನಾ ಸಾರ್ವಜನಿಕ ಸಭೆ ನಡೆಸಿದ್ದರು.
ಏಪ್ರಿಲ್ 1, 2014 ರಂದು ಭದನಾ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ದಂಡ ಪಾವತಿಸಲು ವಿಫಲವಾದರೆ 10 ದಿನ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಇವನ್ನೂ ಓದಿ: ಕುಟುಂಬದ ನಾಲ್ವರ ಆತ್ಮಹತ್ಯೆ: ಪತ್ರಕರ್ತನಿಗೆ ಜಾಮೀನು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.