ADVERTISEMENT

2024ರಲ್ಲಿ ನರೇಂದ್ರ ಮೋದಿಗೆ ಪರ್ಯಾಯವಿಲ್ಲ: ಉಪೇಂದ್ರ ಕುಶ್ವಾಹ

ಪಿಟಿಐ
Published 17 ಜುಲೈ 2023, 12:41 IST
Last Updated 17 ಜುಲೈ 2023, 12:41 IST
ನರೇಂದ್ರ ಮೋದಿ (ಒಳಚಿತ್ರದಲ್ಲಿ ಉಪೇಂದ್ರ ಕುಶ್ವಾಹ)
ನರೇಂದ್ರ ಮೋದಿ (ಒಳಚಿತ್ರದಲ್ಲಿ ಉಪೇಂದ್ರ ಕುಶ್ವಾಹ)   

ಪಟ್ನಾ: ‘2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಯಾರೂ ಇರುವುದಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಸೋಮವಾರ ಪ್ರತಿಪಾದಿಸಿದ್ದು, ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಕಾರ್ಯಸೂಚಿಯಿಂದ ವಿರೋಧಪಕ್ಷಗಳು ಒಂದಾಗುತ್ತಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಿರೋಧಪಕ್ಷಗಳು ಒಟ್ಟಾಗಿ ಸಭೆ ನಡೆಸುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ‘2024ರಲ್ಲಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಿರುವುದಿಲ್ಲ. ಅವರ ಸಮೀಪದ ಪ್ರತಿಸ್ಪರ್ಧಿಗಳು ಕೂಡಾ ಹಿಂದುಳಿದಂತೆ ಕಾಣುತ್ತದೆ. ಎಲ್ಲ ವಿಪಕ್ಷಗಳು ಮೋದಿ ಅವರನ್ನು ಸೋಲಿಸುವ ಏಕೈಕ ಕಾರ್ಯಸೂಚಿಯನ್ನು ಹೊಂದಿವೆ’ ಎಂದು ಉತ್ತರಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ಕೆಲವು ತಿಂಗಳ ಹಿಂದೆ ಉಪೇಂದ್ರ ಅವರು ತೊರೆದಿದ್ದಾರೆ.

ADVERTISEMENT

ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)ಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಎನ್‌ಡಿಎ ಸಭೆಗೆ ಆಹ್ವಾನ ಪಡೆದಿವೆ. ಈ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಕುಶ್ವಾಹ ಅವರನ್ನು ಪ್ರಶ್ನಿಸಿದಾಗ ‘ನಾನು ಎನ್‌ಡಿಎಯಲ್ಲಿ ಇರಲಿ, ಇಲ್ಲದಿರಲಿ ಈ ವಿಷಯನ್ನು ಮಾಧ್ಯಮಗಳ ಮುಂದೆ ಚರ್ಚಿಸಬೇಕಾಗಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.